ಭಾನುವಾರ, ಸೆಪ್ಟೆಂಬರ್ 22, 2019
23 °C
ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ

‘ಪುಸ್ತಕ ಸಂಸ್ಕೃತಿ ಅಪ್ರಸ್ತುತವಾಗುವುದಿಲ್ಲ’

Published:
Updated:
Prajavani

ಬೆಂಗಳೂರು: ‘ತ್ರಿಕಾಲ ಸಂವೇದನೆಯುಳ್ಳ ಪುಸ್ತಕ ಸಂಸ್ಕೃತಿ ಯಾವ ಕಾಲಕ್ಕೂ ಅಪ್ರಸ್ತುತವಾಗುವುದಿಲ್ಲ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಶಾಂತವೇರಿ ಗೋಪಾಲಗೌಡ ವಿಚಾರ ಸಂಸ್ಥೆಯು ನಗರದಲ್ಲಿ ಬುಧವಾರ ಆಯೋಜಿಸಿದ್ದ ಪುಸ್ತಕ ಸಂಸ್ಕೃತಿ ಪ್ರಶಸ್ತಿ ಪ್ರದಾನ ಹಾಗೂ ಸಿ.ಕೆ. ರಾಮೇಗೌಡ ಅವರು ಬರೆದ ‘ಬೆಂಗಳೂರು ನಮ್ಮ ಹೆಮ್ಮೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಕಾಶನ ಕ್ಷೇತ್ರದಲ್ಲಿ ಸ್ಥಿತ್ಯಂತರಗಳಾಗುತ್ತಿವೆ. ಪುಸ್ತಕ ಪ್ರಕಟಿಸುವ ಕೆಲಸ ಉದ್ಯಮವಾಗಿ ಮಾರ್ಪಟ್ಟಿದೆ. ಈ ಸಂದರ್ಭದಲ್ಲಿ ಸಂಸ್ಕೃತಿ ಹಾಗೂ ಉದ್ಯಮವನ್ನು ಬೆಸೆಯುವ ಅನಿವಾರ್ಯ ಇದೆ’ ಎಂದು ಹೇಳಿದರು.

‘ಒಂದು ಮಾಧ್ಯಮ ಇನ್ನೊಂದು ಮಾಧ್ಯಮದ ವಿರೋಧಿಯಲ್ಲ. ನಿಧಾನಕ್ಕೆ ಅವು ಪರಸ್ಪರ ಅನುಸಂಧಾನಕ್ಕೆ ಒಳಪಡುತ್ತಿರುತ್ತವೆ. ಆದ್ದರಿಂದ ಪುಸ್ತಕ ಸಂಸ್ಕೃತಿ ಸಾಯುವುದಿಲ್ಲ. ಅದಕ್ಕೆ ಹಿನ್ನಡೆಯಾಗಬಹುದಷ್ಟೇ’ ಎಂದರು.

‘ದೇಶದಲ್ಲಿ 19,000 ಪುಸ್ತಕ ಪ್ರಕಾಶನ ಸಂಸ್ಥೆಗಳು ಇದ್ದು, ಪ್ರತಿ ವರ್ಷ 80,000 ಪುಸ್ತಕಗಳು ಪ್ರಕಟವಾಗುತ್ತಿವೆ. ಸುಮಾರು 24,000 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತದೆ. ಕನ್ನಡದಲ್ಲಿ ಪ್ರತಿ ವರ್ಷ 6 ರಿಂದ 7 ಸಾವಿರ ಪುಸ್ತಕಗಳು ಬಿಡುಗಡೆಯಾಗುತ್ತವೆ’ ಎಂದರು. ಕಾರ್ಯಕ್ರಮದಲ್ಲಿ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಪುಸ್ತಕ ಸಂಸ್ಕೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Post Comments (+)