‘ಸಿದ್ದರಾಮಯ್ಯ ನನ್ನ ಹಿತೈಷಿ; ನಾನು ಅವರ ಅಭಿಮಾನಿ’

ಶನಿವಾರ, ಮೇ 25, 2019
22 °C
ಅಣ್ಣ– ತಮ್ಮಂದಿರು ಹೊಡೆದಾಡುವ ಪ್ರಶ್ನೆಯೇ ಇಲ್ಲ: ರೇವಣ್ಣ

‘ಸಿದ್ದರಾಮಯ್ಯ ನನ್ನ ಹಿತೈಷಿ; ನಾನು ಅವರ ಅಭಿಮಾನಿ’

Published:
Updated:
Prajavani

ಹಾಸನ: ‘ನನ್ನ ಮೇಲಿನ ಅಭಿಮಾನದಿಂದ ಸಿದ್ದರಾಮಯ್ಯ ಅವರು ರೇವಣ್ಣಗೂ ಸಿ.ಎಂ ಆಗುವ ಅರ್ಹತೆ ಇದೆ ಎಂದು ಹೇಳಿರಬಹುದು. ಹಿಂದಿನಿಂದಲೂ ಅವರು ನನ್ನ ಹಿತೈಷಿ, ನಾನು ಅವರ ಅಭಿಮಾನಿ’ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಸಿದ್ದರಾಮಯ್ಯ ಟ್ವೀಟ್‌ ವಿಚಾರವಾಗಿ ಹೊಳೆನರಸೀಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅವರ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಕುಮಾರಸ್ವಾಮಿ ಸಿ.ಎಂ ಆಗಿರುವಾಗ ನಾನು ಮುಖ್ಯಮಂತ್ರಿ ಆಗುವ ಪ್ರಶ್ನೆ ಎಲ್ಲಿಂದ ಬಂತು? ಅವರು ಅಧಿಕಾರದಲ್ಲಿ ಇರುವಾಗಲೇ ನಾವು ಪೈಪೋಟಿಗೆ ಬರುವುದಿಲ್ಲ. ಯಾವ ಹಿನ್ನೆಲೆಯಲ್ಲಿ ಈ ರೀತಿ ಚರ್ಚೆಯಾಗಿದೆಯೋ ಗೊತ್ತಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ ಸಿ.ಎಂ ಹುದ್ದೆ ಖಾಲಿ ಇಲ್ಲ, ನಾವು ಅಣ್ಣ– ತಮ್ಮಂದಿರು ಹೊಡೆದಾಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಪಪಡಿಸಿದರು.
ಪ್ರಜ್ವಲ್ ರೇವಣ್ಣ ಅವರ ಸುಳ್ಳು ಅಫಿಡವಿಟ್ ಸಲ್ಲಿಕೆ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ‘ಚುನಾವಣಾ ಆಯೋಗದ ನಿರ್ದೇಶನ ಪ್ರಕಾರ ಒಮ್ಮೆ ಚುನಾವಣಾ ಅಧಿಕಾರಿ ನಾಮಪತ್ರ ಅಂಗೀಕರಿಸಿದ ಮೇಲೆ ಅದನ್ನು ತಿರಸ್ಕರಿಸುವ ಅಧಿಕಾರ ಇಲ್ಲ. ಏನಿದ್ದರೂ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಚುನಾವಣಾ ಆಯೋಗ ಯಾವ ಆಧಾರದ ಮೇಲೆ ಹೀಗೆ ಮಾಡುತ್ತಿದೆ ಎಂಬುದು ಗೊತ್ತಿಲ್ಲ. ಆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಉದ್ದೇಶ ಪೂರ್ವಕವಾಗಿಯೇ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಎ.ಮಂಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !