ಲೋಕಸಭೆಯಲ್ಲಿ ಮತ್ತೆ ಕನ್ನಡ

ಭಾನುವಾರ, ಮೇ 26, 2019
30 °C

ಲೋಕಸಭೆಯಲ್ಲಿ ಮತ್ತೆ ಕನ್ನಡ

Published:
Updated:

ಲೋಕಸಭೆಯಲ್ಲಿ ಮತ್ತೆ ಕನ್ನಡ

ನವದೆಹಲಿ, ಮೇ 16– ಸದಸ್ಯರುಗಳು ಪ್ರದೇಶ ಭಾಷೆಯಲ್ಲಿ ಮಾಡಿದ ಭಾಷಣಗಳನ್ನು ಏಕಕಾಲದಲ್ಲಿ ಅನುವಾದ ಮಾಡುವ ವ್ಯವಸ್ಥೆ ಕಲ್ಪಿಸುವ ಬಗ್ಗೆ ಎಷ್ಟರಮಟ್ಟಿನ ಪ್ರಗತಿ ಸಾಧಿಸಲಾಗಿದೆ ಎಂದು ವಿರೋಧ ಪಕ್ಷದ ಸದಸ್ಯರು ಇಂದು ಲೋಕಸಭೆಯಲ್ಲಿ ಪ್ರಶ್ನಿಸಿದರು.

ಎಸ್ಸೆಸ್ಪಿ ಸದಸ್ಯ ಜೆ.ಎಚ್. ಪಟೇಲ್ ಅವರು ಇಂದು ಕನ್ನಡದಲ್ಲಿ ಮಾತನಾಡಿದಾಗ ಈ ಪ್ರಶ್ನೆ ಉದ್ಭವಿಸಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಆರ್.ಕೆ. ಖಾಡಿಲ್ಕರ್ ಅವರು ಸದಸ್ಯರು ಆಡುತ್ತಿರುವ ಭಾಷೆ ತಮಗೆ ಅರ್ಥವಾಗುವುದಿಲ್ಲವಾದ್ದರಿಂದ ಇದಕ್ಕೆ ಉತ್ತರ ಕೊಡುವಂತೆ ಆಡಳಿತ ಪಕ್ಷದವರನ್ನು ಕೇಳಲಿಕ್ಕಾಗದೆಂದು ನುಡಿದರು.

ಎಸ್ಸೆಸ್ಪಿಯ ಜಾರ್ಜ್ ಫರ್ನಾಂಡಿಸ್, ಮಧುಲಿಮಯೆ ಮತ್ತು ಡಿ.ಎಂ.ಕೆ. ಸದಸ್ಯ ಎಸ್. ಕಂದರ್‍ಪನ್ ಇವರುಗಳು ಜೆ.ಎಚ್. ಪಟೇಲ್‌ ಅವರಿಗೆ ಬೆಂಬಲ ನೀಡಿದರು.

ಶುಕ್ರಗ್ರಹದಲ್ಲಿ ವೀನಸ್–5 ಇಳಿಯಿತು

ಮಾಸ್ಕೊ, ಮೇ 16– ರಷ್ಯದ ಗಗನನೌಕೆ ವೀನಸ್–5 ಇಂದು ಬೆಳಿಗ್ಗೆ ಶುಕ್ರಗ್ರಹದ ಮೇಲೆ ಪ್ಯಾರಾಷೂಟ್ ಮೂಲಕ
ಮೆಲ್ಲನೆ ಇಳಿದು ಐವತ್ಮೂರು ನಿಮಿಷ ಕಾಲ ಅಡೆತಡೆಯಿಲ್ಲದ ಸಂಕೇತ ಪ್ರಸಾರ ಮಾಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !