ಸಣ್ಣ ಕೈಗಾರಿಕೆಗಳ ಏಳಿಗೆಗೆ ಆದ್ಯತೆ ನೀಡಿ

ಬುಧವಾರ, ಜೂನ್ 19, 2019
31 °C
‘ಕರ್ನಾಟಕ ಕರಡು ಕೈಗಾರಿಕಾ ನೀತಿ: 2019-24’ರ ಸಂವಾದದಲ್ಲಿ ಸಲಹೆ

ಸಣ್ಣ ಕೈಗಾರಿಕೆಗಳ ಏಳಿಗೆಗೆ ಆದ್ಯತೆ ನೀಡಿ

Published:
Updated:
Prajavani

ಮೈಸೂರು: ‘ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕಾ ವಲಯ ಹಲವು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದೆ. ಕೆಲ ಕೈಗಾರಿಕೆಗಳು ಬಾಗಿಲು ಮುಚ್ಚುವ ಹಂತ ತಲುಪಿವೆ. ಇವುಗಳ ಪುನಶ್ಚೇತನಕ್ಕೆ ಕೈಗಾರಿಕೆ ನೀತಿಯೊಳಗೆಯೇ ವಿಶೇಷ ನೀತಿ ರೂಪಿಸಬೇಕು’

– ಇಲ್ಲಿ ಆಯೋಜಿಸಿದ್ದ ‘ಕರ್ನಾಟಕ ಕರಡು ಕೈಗಾರಿಕಾ ನೀತಿ: 2019-24’ರ ಸಂವಾದ ಕಾರ್ಯಕ್ರಮದಲ್ಲಿ ಮೂಡಿಬಂದ ಪ್ರಮುಖ ಸಲಹೆ ಇದು.

ಹೊಸದಾಗಿ ನೀತಿ ರೂಪಿಸುವ ಸಂಬಂಧ ಸಲಹೆ ಪಡೆಯಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಆಶ್ರಯದಲ್ಲಿ ಕೈಗಾರಿಕೋದ್ಯಮಿಗಳು, ರಫ್ತುದಾರರು ಹಾಗೂ ವಾಣಿಜ್ಯೋದ್ಯಮಿಗಳಿಗಾಗಿ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು.

ಮೈಸೂರು ವಲಯದ ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿ ಸಲಹೆ ನೀಡಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎ.ಎಸ್‌.ಸತೀಶ್‌, ಮೈಸೂರು ಕೈಗಾರಿಕಾ ಸಂಸ್ಥೆ ಕಾರ್ಯದರ್ಶಿ ಸುರೇಶ್‌ ಕುಮಾರ್‌ ಜೈನ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕ ಎಚ್‌.ರಾಮಕೃಷ್ಣೇಗೌಡ ಸೇರಿದಂತೆ ಹಲವರು ಕೈಗಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರು.

‘ಸಣ್ಣ ಕೈಗಾರಿಕೆಗಳಿಗೆ ಸರಿಯಾಗಿ ಸೌಲಭ್ಯಗಳು ಸಿಗುತ್ತಿಲ್ಲ. ಕೈಗಾರಿಕಾ ಪ್ರದೇಶ ಕೂಡ ಸರಿಯಾಗಿ ಅಭಿವೃದ್ಧಿ ಆಗಿಲ್ಲ. ದೊಡ್ಡ ಕೈಗಾರಿಕೆಗಳು ಸ್ಥಳೀಯಮಟ್ಟದ ಸಣ್ಣ ಉದ್ಯಮಿಗಳಿಂದ ವಸ್ತುಗಳನ್ನು ಪಡೆಯುತ್ತಿಲ್ಲ. ಬದಲಾಗಿ ಹೊರರಾಜ್ಯಗಳಿಂದ ತರಿಸಿಕೊಳ್ಳುತ್ತಿವೆ’ ಎಂಬ ದೂರುಗಳು ಕೇಳಿಬಂದವು.

‘ಹೀಗಾಗಿ, ಸಣ್ಣ ಕೈಗಾರಿಕೆಗಳಿಗೆ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಭೂಮಿ ಬೆಲೆ ಕಡಿಮೆ ಮಾಡಿ. ರಫ್ತು ವಿಭಾಗಕ್ಕೆ ಸಂಬಂಧಿಸಿದ ಸೌಲಭ್ಯ ಹೆಚ್ಚಿಸಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಸಂಬಂಧ ವಿನಾಯಿತಿ ನೀಡಬೇಕು’ ಎಂದು ಮನವಿ ಮಾಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಕೈಗಾರಿಕಾ ಪರಿಸ್ಥಿತಿಯನ್ನು ಅಲ್ಲಿನ ಉದ್ಯಮಿಗಳು ಬಿಚ್ಚಿಟ್ಟರು. ‘ಪಕ್ಕದ ತಮಿಳುನಾಡಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಅಲ್ಲಿನ ವಿವಿಧ ಕಚೇರಿಗಳಿಂದ ಬೇಗನೇ ಅನುಮತಿ ಲಭಿಸುತ್ತದೆ, ಆದರೆ, ಚಾಮರಾಜನಗರದಲ್ಲಿ ಸ್ಥಾಪನೆಗೆ ಹಲವು ಬಾರಿ ಕಚೇರಿ ಸುತ್ತಬೇಕಾಗುತ್ತದೆ. ಹೀಗಾಗಿ, ಈ ಪ್ರದೇಶ ಕೈಗಾರಿಕೆಯಲ್ಲಿ ತೀರಾ ಹಿಂದೆ ಬಿದ್ದಿದೆ’ ಎಂದು ದೂರಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಮಾತನಾಡಿ, ‘ಮೈಸೂರು–ಬೆಂಗಳೂರು ನಡುವೆ ಸಂಪರ್ಕ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಸುಧಾರಣೆ ಆಗುತ್ತಿದೆ. ಹೀಗಾಗಿ, ಮೈಸೂರಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಉ‌ತ್ತಮ ಅವಕಾಶಗಳಿವೆ’ ಎಂದರು.

ವಿಟಿಪಿಟಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌.ಸತೀಶ್‌, ಕರಡು ನೀತಿ ಸಂಯೋಜಕ ವೀರಣ್ಣ, ಕಾಂಪೀಟ್‌ ವಿತ್‌ ಚೀನಾ ನೋಡೆಲ್‌ ಅಧಿಕಾರಿ ಶಿವಕುಮಾರ್‌, ಇಲಾಖೆಯ ಶ್ರೀನಿವಾಸ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಜಿ.ಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !