ಗೋಹತ್ಯೆ ಗುಂಪು ಹಲ್ಲೆ: ಮಾಹಿತಿಗೆ ನಿರ್ದೇಶನ

ಬುಧವಾರ, ಮೇ 22, 2019
29 °C

ಗೋಹತ್ಯೆ ಗುಂಪು ಹಲ್ಲೆ: ಮಾಹಿತಿಗೆ ನಿರ್ದೇಶನ

Published:
Updated:

ನವದೆಹಲಿ: ಗೋ ಹತ್ಯೆ ಗುಂಪು ಹಲ್ಲೆ ಪ್ರಕರಣಗಳಲ್ಲಿ 2010ರಿಂದ 2017ರವರೆಗೆ ಎಷ್ಟು ಜನರ ಕೊಲೆಯಾಗಿದೆ ಎಂಬ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸುವಂತೆ ಕೇಂದ್ರ ಮಾಹಿತಿ ಆಯೋಗವು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶಿಸಿದೆ.

ಸಮೀರ್‌ ಖಾನ್‌ ಎಂಬುವರು ಈ ಕುರಿತು ರಾಜ್ಯವಾರು ಅಂಕಿ ಅಂಶ ಒದಗಿಸುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರು.

ಗೋ ಹತ್ಯೆ ಗುಂಪು ಹಲ್ಲೆ ಪ್ರಕರಣಗಳಲ್ಲಿ ಎಷ್ಟು ಜನರ ಮೇಲೆ ಹಲ್ಲೆಯಾಗಿದೆ, ಅದರಲ್ಲಿ ಕೊಲೆಯಾದವರ ಮತ್ತು ಗಾಯಗೊಂಡವರ ಹೆಸರು ಹಾಗೂ ಅವರ ಕುಟುಂಬದವರಿಗೆ ಸರ್ಕಾರದ ವತಿಯಿಂದ ನೀಡಲಾಗಿರುವ ಪರಿಹಾರದ ಮಾಹಿತಿ ನೀಡುವಂತೆ ಅವರು ಅರ್ಜಿಯಲ್ಲಿ ಕೋರಿದ್ದರು.

ಆದರೆ ಖಾನ್‌ ಅವರ ಈ ಅರ್ಜಿಗೆ ಸಚಿವಾಲಯ ಯಾವುದೇ ಮಾಹಿತಿ ನೀಡಿರಲಿಲ್ಲ. ಇದರಿಂದಾಗಿ ಅವರು ಕೇಂದ್ರ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿದಾರರಿಗೆ ಮಾಹಿತಿ ದೊರೆತಿಲ್ಲ ಎಂಬುದು ಖಚಿತವಾದ ನಂತರ ಕೇಂದ್ರ ಮಾಹಿತಿ ಆಯುಕ್ತ ಸುಧೀರ್‌ ಭಾರ್ಗವ ಅವರು, ‘ಆರ್‌ಟಿಐ ಕಾಯ್ದೆಯಡಿ ಅರ್ಜಿದಾರರ ಅರ್ಜಿಗೆ ನಿಗದಿತ ಅವಧಿಯೊಳಗೆ ಪ್ರತಿಕ್ರಿಯಿಸುವುದು ಕಡ್ಡಾಯ’ ಎಂದು ಹೇಳಿದ್ದಾರೆ.

ಈ ಕುರಿತು ನಾಲ್ಕು ವಾರಗಳಲ್ಲಿ ಅರ್ಜಿದಾರರಿಗೆ ಪ್ರತಿಕ್ರಿಯಿಸಿ, ಅದರ ಪ್ರತಿಯನ್ನು ಆಯೋಗಕ್ಕೂ ನೀಡುವಂತೆ ಗೃಹ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ನಿರ್ದೇಶಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !