ಚಂದ್ರನ ಅಗೋಚರ ಭಾಗದ ಅನಾವರಣ

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಶಶಿಯ ಹಿಮ್ಮುಖ ರಹಸ್ಯಗಳನ್ನು ಭೇದಿಸಿದ ಚೀನಾದ ಗಗನನೌಕೆ

ಚಂದ್ರನ ಅಗೋಚರ ಭಾಗದ ಅನಾವರಣ

Published:
Updated:
Prajavani

ಪ್ಯಾರಿಸ್‌ (ಎಎಫ್‌ಪಿ): ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಅಧ್ಯಯನದ ನಿಟ್ಟಿನಲ್ಲಿ ಚೀನಾ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇದೇ ಮೊದಲ ಬಾರಿಗೆ ಅದು ಶಶಿಯ ಅಗೋಚರ ಭಾಗದ ಚಿತ್ರವನ್ನು ಭೂಮಿಗೆ ರವಾನಿಸಿದೆ. 

ಚಂದ್ರನ ಅಗೋಚರ ಭಾಗದ ಅಧ್ಯಯನಕ್ಕಾಗಿ ಕಳೆದ ಡಿಸೆಂಬರ್‌ 8ರಂದು ಷಿಚಾಂಗ್‌ ಉಪಗ್ರಹ ಉಡಾವಣಾ ಕೇಂದ್ರದಿಂದ ‘ಚಾಂಗ್‌ 4’ ಅನ್ನು ಚೀನಾ ಉಡಾಯಿಸಿತ್ತು. ನಾಲ್ಕು ದಿನಗಳ ನಂತರ, ಅಂದರೆ  ಡಿಸೆಂಬರ್‌ 12ರಂದು ಈ ಗಗನನೌಕೆ ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಕಳೆದ ಜನವರಿ 3ರಂದು ಚಂದ್ರನ ಅಗೋಚರ ಭಾಗದಲ್ಲಿ ಇಳಿದ ‘ಚಾಂಗ್‌ 4’ನ ‘ಯುಟು 2’ ರೋವರ್‌, ಮೇ 15ರಂದು ಈ ಅಗೋಚರ ಭಾಗದ ಹಲವು ಮಾಹಿತಿಗಳನ್ನು ವಿಜ್ಞಾನಿಗಳಿಗೆ ರವಾನಿಸಿದೆ. 

ಚಂದಿರನ ‘ಅಗೋಚರ’ ಕುತೂಹಲ

* ಭೂಮಿಗೆ ಕಾಣುವುದು ಚಂದ್ರನ ಒಂದು ಮುಖ ಮಾತ್ರ. ಚಂದಿರನ ಮತ್ತೊಂದು ಭಾಗ ಅಥವಾ ಅಗೋಚರ ಭಾಗದಲ್ಲಿ ಇಳಿದಿರುವ ‘ಚಾಂಗ್‌ 4’ ಮೊದಲ ಬಾರಿಗೆ ಅದರ ಮೇಲ್ಮೈ ಭಾಗ ಮತ್ತು ರಚನೆಯ ಮಾಹಿತಿಯನ್ನು ರವಾನಿಸುವಲ್ಲಿ ಯಶಸ್ವಿಯಾಗಿದೆ.

* ಚಂದ್ರ ಪರಿಭ್ರಮಿಸುವ ವೇಳೆಯಲ್ಲಿಯೂ ಕಾಣದ ಈ ಭಾಗ ರೇಡಿಯೊ ತರಂಗಾಂತರಗಳಿಂದ ಮುಕ್ತವಾಗಿದೆ.

* ಚಂದ್ರನ ದಕ್ಷಿಣ ಧ್ರುವದಲ್ಲಿರುವ ಅತಿ ದೊಡ್ಡ ಮತ್ತು ಅತಿ ಪ್ರಾಚೀನ ಕುಳಿ ‘ಐಟ್‌ಕೆನ್‌’ ಭಾಗದಲ್ಲಿ ‘ಚಾಂಗ್‌ 4’ನ ರೋವರ್‌ ಇಳಿದಿತ್ತು. 2,300 ಕಿ.ಮೀ. ವ್ಯಾಪ್ತಿಯಲ್ಲಿರುವ ಇದು ಚಂದ್ರನ ಅರ್ಧ ಭಾಗವನ್ನು ಆವರಿಸಿದೆ. 

* ಅತಿ ಕಡಿಮೆ ರೇಡಿಯೊ ತರಂಗಾಂತರ ಮಟ್ಟದ ಈ ಭಾಗದಲ್ಲಿ ಹಲವು ಪ್ರಯೋಗಗಳ ಮೂಲಕ ಅಧ್ಯಯನ ನಡೆಸುತ್ತಿದೆ ‘ಚಾಂಗ್‌ 4’. 

* ಕರಗುವ ಬಂಡೆಗಳ ಮೂಲಕ ಚಂದ್ರನ ಈ ಭಾಗ ರೂಪುಗೊಂಡಿದೆ ಎನ್ನುತ್ತಾರೆ ವಿಜ್ಞಾನಿಗಳು 

* ಖನಿಜಾಂಶಗಳು ಚಂದ್ರನ ಆಳಕ್ಕೆ ಇದ್ದರೆ, ಹಗುರ ಖನಿಜಾಂಶಗಳು ಮೇಲ್ಭಾಗದಲ್ಲಿದ್ದು ಪದರಗಳು ರಚನೆಯಾಗಿವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.  

* ಅತಿ ಕಡಿಮೆ ಗುರುತ್ವಾಕರ್ಷಣೆ ಇರುವ ಈ ಭಾಗದಲ್ಲಿ ಸಸ್ಯಗಳು ಬೆಳೆಯುವ ವಾತಾವರಣವಿದೆಯೇ ಎಂಬ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ 

* ಇಲ್ಲಿ ನೀರು ಮತ್ತು ಇತರೆ ಸಂಪನ್ಮೂಲಗಳ ಲಭ್ಯತೆಯ ಕುರಿತು ಅಧ್ಯಯನ ನಡೆಸಲಾಗುತ್ತಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !