ಎನ್‌ಬಿಎ: ಜಾನ್ಸನ್‌, ಬರ್ಡ್‌ಗೆ ಜೀವಮಾನ ಸಾಧನೆ ಗೌರವ

ಸೋಮವಾರ, ಮೇ 20, 2019
28 °C
ಎನ್‌ಬಿಎ ಜೀವಮಾನ ಸಾಧನೆ ಗೌರವ

ಎನ್‌ಬಿಎ: ಜಾನ್ಸನ್‌, ಬರ್ಡ್‌ಗೆ ಜೀವಮಾನ ಸಾಧನೆ ಗೌರವ

Published:
Updated:
Prajavani

ಲಾಸ್‌ ಏಂಜಲೀಸ್‌ (ಎಎಫ್‌ಪಿ): ನ್ಯಾಷನಲ್‌ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ (ಎನ್‌ಬಿಎ) ಲೀಗ್‌ನಲ್ಲಿ ಬದ್ಧ ಎದುರಾಳಿಗಳಾಗಿದ್ದ ‘ಮ್ಯಾಜಿಕ್‌’ ಜಾನ್ಸನ್‌ ಹಾಗೂ ಲ್ಯಾರಿ ಬರ್ಡ್‌ ಅವರು ಎನ್‌ಬಿಎದ ಜೀವಮಾನ ಸಾಧನೆ ಗೌರವಕ್ಕೆ ಪಾತ್ರರಾಗಿದ್ದಾರೆ. 2019ರ ಸಾಲಿನ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.

1980ರ ದಶಕದಲ್ಲಿ ಇವರಿಬ್ಬರೂ ಕ್ರಮವಾಗಿ ಲಾಸ್‌ ಏಂಜಲೀಸ್‌ ಲೇಕರ್ಸ್‌ ಹಾಗೂ ಬೋಸ್ಟನ್‌ ಸೆಲ್ಟಿಕ್ಸ್‌ ತಂಡಗಳ ಪರ ಆಡಿದ್ದರು. ಎರಡೂ ತಂಡಗಳು ಎನ್‌ಬಿಎನಲ್ಲಿ ತಮ್ಮ ಪಾರಮ್ಯ ಸಾಧಿಸಲು ಭಾರೀ ಪೈಪೋಟಿ ನಡೆಸಿದ್ದವು.

ಜೂನ್‌ 24ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಹಿಂದೆ ಈ ಪ್ರಶಸ್ತಿಯು ಬಿಲ್ ರಸೆಲ್‌ (2017) ಹಾಗೂ ಆಸ್ಕರ್‌ ರಾಬರ್ಟ್‌ಸನ್‌(2018) ಅವರ ಪಾಲಾಗಿತ್ತು.

ಜಾನ್ಸನ್‌ ಹಾಗೂ ಬರ್ಡ್‌ ಇಬ್ಬರೂ ಮೂರು ಬಾರಿ ಎನ್‌ಬಿಎದ ಅತ್ಯಮೂಲ್ಯ ಆಟಗಾರ ಪ್ರಶಸ್ತಿ ಪಡೆದಿದ್ದಾರೆ.

ನೈಶ್ಮಿತ್‌ ಸ್ಮಾರಕ ‘ಹಾಲ್‌ ಆಫ್‌ ಫೇಮ್‌’ ಗೌರವವೂ ಉಭಯ ಆಟಗಾರರಿಗೆ ಸಂದಿದೆ.

ಇವರಿಬ್ಬರೂ 1992ರ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ವಿಜೇತ ಅಮೆರಿಕದ ಬ್ಯಾಸ್ಕೆಟ್‌ಬಾಲ್‌ ತಂಡದ ಸದಸ್ಯರಾಗಿದ್ದಾರೆ. ವೃತ್ತಿಜೀವನದುದ್ದಕ್ಕೂ ಅವರು ತಮ್ಮ ಒಂದೇ ತಂಡದಲ್ಲಿ ಆಡಿದ್ದರು.

ಜಾನ್ಸನ್‌ ಅವರು ಲೇಕರ್ಸ್‌ ತಂಡದೊಂದಿಗೆ ಐದು ಬಾರಿ ಎನ್‌ಬಿಎ ಕಿರೀಟ ಧರಿಸಿದ್ದರು. ಸೆಲ್ಟಿಕ್ಸ್‌ ತಂಡದ ಪರ ಆಡಿದ್ದ ಬರ್ಡ್‌ ಅವರು ತಂಡ ಮೂರು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !