ಕಬಡ್ಡಿ : ಡೆಲ್ಲಿ ತಂಡಕ್ಕೆ ಜಯ

ಸೋಮವಾರ, ಮೇ 20, 2019
30 °C

ಕಬಡ್ಡಿ : ಡೆಲ್ಲಿ ತಂಡಕ್ಕೆ ಜಯ

Published:
Updated:
Prajavani

ಪುಣೆ: ಆರಂಭದಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡುಬಂದರೂ ಬಳಿಕ ನಿಧಾನವಾಗಿ ಪಂದ್ಯದ ಹಿಡಿತ ಕಂಡುಕೊಂಡ ದಿಲರ್ ಡೆಲ್ಲಿ ತಂಡ, ಇಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಇಂಡೋ ಇಂಟರ್‍ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಚೇ ರಾಜೆ ತಂಡವನ್ನು ಮಣಿಸಿತು.

ಇಲ್ಲಿನ ಬಾಳೆವಾಡಿಯಲ್ಲಿರುವ  ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ನಡೆದ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಮಿಂಚಿನ ಆಟವಾಡಿದ ಡೆಲ್ಲಿ ತಂಡ 56-35 ಅಂಕಗಳಿಂದ ಮುಂಬೈ ಚೇ ರಾಜೆ ತಂಡವನ್ನು ಬಗ್ಗುಬಡಿಯಿತು.

ಈ ಮೂಲಕ ಲೀಗ್‍ನಲ್ಲಿ ಸತತ ಎರಡನೇ ಜಯ ದಾಖಲಿಸಿ ಅಂಕಪಟ್ಟಿಯ ಅಗ್ರಸ್ಥಾನ ಭದ್ರ ಪಡಿಸಿಕೊಂಡಿದೆ.

 ರೇಡರ್ ಸುನಿಲ್ ಜೈಪಾಲ್ ಪಂದ್ಯ ಶ್ರೇಷ್ಠ ಗೌರವ ಪಡೆದರೆ, ನವೀನ್   ರೇಡರ್ ಪ್ರಶಸ್ತಿಗೆ ಭಾಜನರಾದರು. ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಚಾಲೆಂಜರ್ಸ್ ತಂಡವನ್ನು 52-30 ಅಂಕಣಗಳ ಭಾರಿ ಅಂತರದಿಂದ ಮಣಿಸಿದ್ದ ದಿಲರ್ ಡೆಲ್ಲಿ ತಂಡ, ಮುಂಬೈ ತಂಡವನ್ನೂ ಅದೇ ರೀತಿ ಬಗ್ಗುಬಡಿಯುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಮತ್ತೊಂದೆಡೆ ತನ್ನ ಮೊದಲ ಹಣಾಹಣಿಯಲ್ಲಿ ತೆಲುಗು ಬುಲ್ಸ್ ಎದುರು ಒಂದು ಅಂಕದಿಂದ (34-33) ರೋಚಕ ಜಯ ದಾಖಲಿಸಿದ್ದ ಮುಂಬೈ ತಂಡ ಟೂರ್ನಿಯಲ್ಲಿ ಮೊದಲ ಸೋಲಿನ ಕಹಿಯುಂಡಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !