ಮಂಗಳವಾರ, ಏಪ್ರಿಲ್ 7, 2020
19 °C

ರಾಹುಲ್‌ ಹೊಸ ಟೀಕಾಸ್ತ್ರ ‘ಮೋದಿ ಲೈ’: ಅಂಥ ಪದವೇ ಇಲ್ಲ ಎಂದ ಆಕ್ಸ್‌ಫರ್ಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಮೋದಿ ಲೈ’ (ಮೋದಿಯ ಸುಳ್ಳು) ಎಂಬ ಪದ ಈಗ ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ ಎಂದು  ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸುಳ್ಳುಗಳನ್ನೇ ಹೇಳುತ್ತಾರೆ ಎಂದು ಆರೋಪಿಸಿರುವ ರಾಹುಲ್‌ ಗಾಂಧಿ, ಮೋದಿಲೈಸ್‌ ಎಂಬ ವೆಬ್‌ಸೈಟ್‌ ಒಂದನ್ನು ಉಲ್ಲೇಖಿಸಿ ಇದು ಮೋದಿ ಅವರ ಸುಳ್ಳುಗಳನ್ನೇ ಪ್ರಮುಖವಾಗಿ ಪಟ್ಟಿ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಈ ವೆಬ್‌ಸೈಟ್‌ನ ಲಿಂಕ್‌ ಅನ್ನೂ ರಾಹುಲ್‌ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರ ಅನೇಕ ‘ಸುಳ್ಳು’ ಹೇಳಿಕೆಗಳನ್ನು ಈ ವೆಬ್‌ಸೈಟ್‌ ಪಟ್ಟಿ ಮಾಡಿದೆ ಎಂದಿದ್ದಾರೆ.

ಇಂತಹ ಯಾವುದೇ ಪದವನ್ನು ಪ‍ದಕೋಶಕ್ಕೆ ಸೇರಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪದಕೋಶದ ಪುಟದ ಚಿತ್ರ ನಕಲಿ ಎಂದು ‘ಆಕ್ಸ್‌ಫರ್ಡ್‌ ಡಿಕ್ಶ್‌ನರೀಸ್‌’ ಟ್ವೀಟ್‌ ಮಾಡಿದೆ. ಇದನ್ನು ಬಳಸಿಕೊಂಡಿರುವ ಬಿಜೆಪಿ, ರಾಹುಲ್‌ ವಿರುದ್ಧ ಹರಿಹಾಯ್ದಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು