ಗುರು ಮತ್ತುಚೇಲಾ ಸರ್ಕಾರ ಇದೇ 23ರಂದು ಕೊನೆಯಾಗಲಿದೆ: ಮಾಯಾವತಿ

ಗುರುವಾರ , ಮೇ 23, 2019
28 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಗುರು ಮತ್ತುಚೇಲಾ ಸರ್ಕಾರ ಇದೇ 23ರಂದು ಕೊನೆಯಾಗಲಿದೆ: ಮಾಯಾವತಿ

Published:
Updated:
Prajavani

ವಾರಾಣಸಿ: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಪ್ರಧಾನಿ ಮೋದಿ ಅವರ ಕ್ಷೇತ್ರ ವಾರಾಣಸಿಯಲ್ಲಿಯೇ ಅವರ ವಿರುದ್ಧ ಹರಿಹಾಯ್ದಿದ್ದಾರೆ. ‘ಗುರು ಮತ್ತುಚೇಲಾ ಸರ್ಕಾರ ಇದೇ 23ರಂದು ಕೊನೆಯಾಗಲಿದೆ’ ಎಂದು ಅವರು ಹೇಳಿದ್ದಾರೆ. 

‘ಚುನಾವಣೆ ಕೊನೆಯಾಗುವ ಹೊತ್ತಿಗೆ ಮೋದಿ ಅವರಿಗೆ ಮಹಿಳೆಯರ ನೆನಪಾಗುತ್ತಿದೆ, ಅವರಿಗೆ ಗೌರವ ಕೊಡುವ ಬಗ್ಗೆ ಮಾತನಾಡುತ್ತಿದ್ದಾರೆ. ಹೆಂಡತಿಯನ್ನು ಗೌರವಿಸಲು ಗೊತ್ತಿಲ್ಲದವರು ತಾಯಂದಿರು ಮತ್ತು ಸಹೋದರಿಯನ್ನು ಹೇಗೆ ಗೌರವಿಸುತ್ತಾರೆ’ ಎಂದು ಮಾಯಾವತಿ ಪ್ರಶ್ನಿಸಿದ್ದಾರೆ. ಮೋದಿ ಅವರ ಜಾತಿಯ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. 

ಹುಸಿ ಕನಸುಗಳನ್ನು ಜನರಿಗೆ ಮಾರಾಟ ಮಾಡಿ ನಂತರ ವಂಚಿಸುವುದು ಮೋದಿ ಅವರ ಚಾಳಿ ಎಂದು ಅವರು ಆರೋಪಿಸಿದ್ದಾರೆ. ಮಹಾಮೈತ್ರಿಕೂಟದ ಸಮಾವೇಶದಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಮತ್ತು ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್‌ ಸಿಂಗ್ ಅವರೂ ಉಪಸ್ಥಿತರಿದ್ದರು. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 4

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !