ಮೇಲ್ಜಾತಿಗೂ ಶೇ 10ಮೀಸಲಾತಿ

ಶುಕ್ರವಾರ, ಮೇ 24, 2019
22 °C

ಮೇಲ್ಜಾತಿಗೂ ಶೇ 10ಮೀಸಲಾತಿ

Published:
Updated:

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೂ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿಯನ್ನು ಕಲ್ಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಸೌಲಭ್ಯವು 2019 ಫೆಬ್ರುವರಿ 1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಅದರನ್ವಯ ಉಳಿದ ರಾಜ್ಯಗಳಲ್ಲೂ ಈ ಆದೇಶ ಜಾರಿಗೆ ಬರಬೇಕಿತ್ತು. ರಾಜ್ಯ ಸರ್ಕಾರ ಈಗ ಅದಕ್ಕೆ ಚಾಲನೆ ನೀಡಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ (ಕೇಂದ್ರ ಸರ್ಕಾರದ ಜಾತಿ ಪಟ್ಟಿಯಲ್ಲಿರುವಂತೆ) ಜಾತಿಯ ಹೆಸರುಗಳನ್ನು ಬಿಟ್ಟು ಇತರೆ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ಇರುವವರು ಸೌಲಭ್ಯ ಪಡೆಯಬಹುದು. ₹8
ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಈ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

5 ಎಕರೆಗಿಂತ ಹೆಚ್ಚು ಕೃಷಿ ಭೂಮಿ, ಗ್ರಾಮೀಣ ಭಾಗದಲ್ಲಿ ಒಂದು ಸಾವಿರ ಚದರ ಅಡಿಗಳ ವ್ಯಾಪ್ತಿಯಲ್ಲಿ ಮನೆ, ನಗರಸಭೆ ವ್ಯಾಪ್ತಿಯಲ್ಲಿ 100 ಚದರ ಯಾರ್ಡ್ (ಒಂದು ಯಾರ್ಡ್‌ಗೆ 3 ಚದರ ಅಡಿ) ವಾಸದ ಫ್ಲ್ಯಾಟ್‌, ನಗರಸಭೆ ಬಿಟ್ಟು ಉಳಿದ ಪಟ್ಟಣಗಳಲ್ಲಿ 200 ಚದರ ಯಾರ್ಡ್ ವಾಸದ ಫ್ಲ್ಯಾಟ್‌ ಹೊಂದಿರುವವರು ಮೀಸಲಾತಿ ಸೌಲಭ್ಯದ ವ್ಯಾಪ್ತಿಗೆ ಬರುವುದಿಲ್ಲ.ಬ್ರಾಹ್ಮಣರು, ಆರ್ಯವೈಶ್ಯ, ಜೈನರು ಸೇರಿದಂತೆ ಕೇಂದ್ರ ಸರ್ಕಾರದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗಿದ್ದ ಜಾತಿ ಸಮುದಾಯದ ಜನರು ಆರ್ಥಿಕ ಮೀಸಲಾತಿ ಸೌಲಭ್ಯಕ್ಕೆ ಅರ್ಹರು. 

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 0

  Sad
 • 0

  Frustrated
 • 14

  Angry

Comments:

0 comments

Write the first review for this !