ಯುವತಿಯರಿಗೆ ಹೆರಾಯಿನ್: ಮೂವರ ಬಂಧನ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ವಿವೇಕನಗರ ಪೊಲೀಸ್ ಬಲೆಗೆ ಮಣಿಪುರದ ಹೋಟೆಲ್ ನೌಕರರು

ಯುವತಿಯರಿಗೆ ಹೆರಾಯಿನ್: ಮೂವರ ಬಂಧನ

Published:
Updated:
Prajavani

ಬೆಂಗಳೂರು: ನಗರದಲ್ಲಿ ತಮ್ಮದೇ ವ್ಯವಸ್ಥಿತ ಜಾಲ ಸೃಷ್ಟಿಸಿಕೊಂಡು ವಿದ್ಯಾರ್ಥಿಗಳಿಗೆ ಹಾಗೂ ಪಬ್‌ಗಳಿಗೆ ಬರುವ ಯುವತಿಯರಿಗೆ ಹೆರಾಯಿನ್ ಮಾದಕ ವಸ್ತುವನ್ನು ಮಾರುತ್ತಿದ್ದ ಮಣಿಪುರದ ಮೂವರು ಹೋಟೆಲ್‌ ನೌಕರರು ವಿವೇಕನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಆರೋಪಿಗಳು ಬುಧವಾರ ಸಂಜೆ ಆಸ್ಟಿನ್‌ ಟೌನ್‌ ಸಮೀಪದ ಬಿಡಿಎ ಕಾಂಪ್ಲೆಕ್ಸ್ ಬಳಿ ಹೆರಾಯಿನ್ ಮಾರುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಸುಳಿವು ಆಧರಿಸಿ ಇನ್‌ಸ್ಪೆಕ್ಟರ್ ಕೆ.ಎಂ.ರಫೀಕ್ ನೇತೃತ್ವದ ತಂಡ ದಾಳಿ ನಡೆಸಿತು. ಬಂಧಿತರಿಂದ ₹ 14 ಲಕ್ಷ ಮೌಲ್ಯದ 42 ಗ್ರಾಂ ಹೆರಾಯಿನ್, 244 ಸಣ್ಣ ಡಬ್ಬಿಗಳು ಹಾಗೂ ₹ 7,500 ನಗದು ಜಪ್ತಿ ಮಾಡಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೊಹಮದ್ ಮುಜಿಬುರ್ ರೆಹಮಾನ್ (26), ಮೊಹಮದ್ ಅನ್ವರ್ (34) ಹಾಗೂ ಪೌಮಿನ್ ಲಿಯಾನ್ (25) ಬಂಧಿತರು. ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಇವರು, ಬೇರೆ ಬೇರೆ ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ರಾಜ್ಯದಿಂದ ಹೆರಾಯಿನ್ ತಂದು, ನಗರದ ವಿದ್ಯಾರ್ಥಿಗಳು ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಮಾರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಡಬ್ಬಿಗೆ ₹ 8 ಸಾವಿರ: ಆರೋಪಿಗಳಿಗೆ 50ಕ್ಕೂ ಹೆಚ್ಚು ಕಾಯಂ ಗಿರಾಕಿಗಳಿದ್ದರು. ‘ಕಸ್ಟಮರ್ಸ್’ ಹೆಸರಿನಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿದ್ದ ಆರೋಪಿಗಳು, ಎಷ್ಟು ಹೆರಾಯಿನ್ ಬೇಕು ಎಂಬ ಬಗ್ಗೆ ಅದರಲ್ಲೇ ಆರ್ಡರ್ ಪಡೆದುಕೊಳ್ಳುತ್ತಿದ್ದರು. ನಂತರ ಬಿಡಿಎ ಕಾಂಪ್ಲೆಕ್ಸ್ ಹಿಂಭಾಗದ ರಸ್ತೆಗೆ ಕರೆಸಿಕೊಂಡು ಹಣ ಪಡೆದು ಕೊಟ್ಟು ಕಳುಹಿಸುತ್ತಿದ್ದರು.

ಅಲ್ಲದೇ ವಾರಾಂತ್ಯದ ದಿನಗಳಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ, ವೈಟ್‌ಫೀಲ್ಡ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಹೋಗಿ ಪಬ್‌ಗಳ ಬಳಿ ನಿಲ್ಲುತ್ತಿದ್ದರು. ಅಲ್ಲಿಗೆ ಬರುವ ಯುವತಿಯರನ್ನೇ ಗುರಿ ಮಾಡಿಕೊಂಡು ಹೆರಾಯಿನ್‌ನ ಒಂದು ಡಬ್ಬಿಯನ್ನು (0.30 ಗ್ರಾಂ) ₹ 5 ಸಾವಿರದಿಂದ ₹ 8 ಸಾವಿರಕ್ಕೆ ಮಾರುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !