ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜೀಬ್ರಾ ಸಾವು

ಶುಕ್ರವಾರ, ಮೇ 24, 2019
29 °C

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜೀಬ್ರಾ ಸಾವು

Published:
Updated:
Prajavani

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಆರು ವರ್ಷದ ಪೃಥ್ವಿ ಎಂಬ ಗಂಡು ಜೀಬ್ರಾ ಅನಾರೋಗ್ಯದಿಂದ ಮೃತಪಟ್ಟಿದೆ.

’2015ರಲ್ಲಿ ಇಸ್ರೇಲ್‌ನಿಂದ ಪ್ರಾಣಿ ವಿನಿಮಯ ಯೋಜನೆಯಡಿ ಈ ಜೀಬ್ರಾವನ್ನು ತರಲಾಗಿತ್ತು. ಜೀಬ್ರಾ ಪೃಥ್ವಿಯು ಗುರುವಾರ ಬೆಳಿಗ್ಗೆ ಹೊಟ್ಟೆ ನೋವಿನಿಂದ ಬಳಲಿ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ಹೆಬ್ಬಾಳದ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ‘ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸಂಜಯ್ ಬಿಜ್ಜೂರು ತಿಳಿಸಿದರು.

ಉದ್ಯಾನದಲ್ಲಿ ನಾಲ್ಕು ಜೀಬ್ರಾಗಳಿದ್ದವು. ಪೃಥ್ವಿ ಸಾವಿನಿಂದಾಗಿ ಸಂಖ್ಯೆ ಮೂರಕ್ಕೆ ಇಳಿದಿದೆ. ಇವುಗಳ ಪೋಷಣೆಗಾಗಿ ಇನ್ಫೊಸಿಸ್ ಪ್ರತಿಷ್ಠಾನ ಪ್ರತ್ಯೇಕ ಆವರಣ ನಿರ್ಮಿಸಿ ಕೊಟ್ಟಿತ್ತು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !