ಭಾನುವಾರ, ಸೆಪ್ಟೆಂಬರ್ 26, 2021
21 °C
ಗೋಪ್ಯತೆ ಕಾಪಾಡುವ ಉದ್ದೇಶ: ಹಣಕಾಸು ಸಚಿವಾಲಯ

ಕಪ್ಪು ಹಣ: ಮಾಹಿತಿಗೆ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸ್ವಿಟ್ಜರ್ಲೆಂಡ್‌ನಿಂದ ಪಡೆಯಲಾಗಿರುವ ಕಪ್ಪು ಹಣದ ಮಾಹಿತಿಯನ್ನು ಗೋಪ್ಯತೆ ಕಾರಣದಿಂದ ಬಹಿರಂಗಪಡಿಸಲಾಗದು
ಎಂದು ಹಣಕಾಸು ಸಚಿವಾಲಯ ತಿಳಿಸಿದೆ.‌

‘ಭಾರತ ಮತ್ತು ಸ್ವಿಟ್ಜರ್ಲೆಂಡ್‌ ನಡುವೆ ಕಪ್ಪು ಹಣದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿವೆ. ಹಣದ ಬಗ್ಗೆ ತನಿಖೆ ನಡೆಯುತ್ತಿದೆ. ಇದೊಂದು ನಿರಂತರ ಪ್ರಕ್ರಿಯೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರ ಪ್ರಶ್ನೆಗೆ ತಿಳಿಸಿದೆ.

‘ಸರ್ಕಾರ ಗೋಪ್ಯತೆ ಕಾರಣದಿಂದ ಹಣದ ಕುರಿತು ಮಾಹಿತಿ ಬಹಿರಂಗಪಡಿಸುವುದಿಲ್ಲ’ ಎಂದು ಪಿಟಿಐ ಪತ್ರಕರ್ತರು ಸಲ್ಲಿಸಿದ್ದ ಅರ್ಜಿಗೆ ತಿಳಿಸಿದೆ. ಸ್ವಿಟ್ಜರ್ಲೆಂಡ್‌ನಿಂದ ಎಷ್ಟು ಹಣ ಪಡೆಯಲಾಗಿದೆ, ಯಾವ ಕಂಪನಿಗಳು, ಯಾರು ಎಂಬ ಬಗ್ಗೆ ತಿಳಿಸಬೇಕು ಎಂದು  ಕೋರಿ ಅರ್ಜಿ ಸಲ್ಲಿಸಲಾಗಿತ್ತು.

ಪರಸ್ಪರ ಆಡಳಿತ ಸಹಕಾರ ಸಂಬಂಧ ಭಾರತ ಮತ್ತು ಸ್ವಿಟ್ಜರ್ಲೆಂಡ್‌ ಒಪ್ಪಂದ ಮಾಡಿಕೊಂಡಿವೆ. ಹಣಕಾಸು ಖಾತೆಗಳ ಬಗ್ಗೆ ಸ್ವಯಂಚಾಲಿತವಾಗಿ ಮಾಹಿತಿ ಹಂಚಿಕೆಯಾಗಲಿದೆ. ಈ ಸಂಬಂಧ ಜಂಟಿ ಘೋಷಣೆಯನ್ನು 2016ರ ನ.22 ರಂದು ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು