ಶನಿವಾರ, ಸೆಪ್ಟೆಂಬರ್ 21, 2019
24 °C
ಉಗ್ರರನ್ನು ಮುಖ್ಯವಾಹಿನಿಗೆ ತರಲು ತಜ್ಞರ

ಶರಣಾಗತಿ ನೀತಿ: ಕರಡು ಸಿದ್ಧ

Published:
Updated:

ಶ್ರೀನಗರ: ಉಗ್ರ ಕೃತ್ಯಗಳಲ್ಲಿ ತೊಡಗಿರುವ ಸ್ಥಳೀಯರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರದ ರಕ್ಷಣಾ ತಜ್ಞರು ಶರಣಾಗತಿ ನೀತಿಯ ನೂತನ ಕರಡು ಸಿದ್ಧಪಡಿಸಿದ್ದಾರೆ.

ದೇಶದಲ್ಲಿ ಶಾಂತಿ ಕಾಪಾಡುವ ಮಹತ್ವದ ಉದ್ದೇಶ ಹೊಂದಿರುವ ಈ ಕರಡು, ಉಗ್ರ ಚಟುವಟಿಕೆಯತ್ತ ಹೆಜ್ಜೆಯಿಟ್ಟಿರುವ ಯುವ ಸಮುದಾಯವನ್ನು ಸೆಳೆಯಲಿದೆ ಎನ್ನಲಾಗುತ್ತಿದೆ.

’ದಾರಿ ತಪ್ಪಿದ ಯುವ ಸಮುದಾಯಕ್ಕಾಗಿ ಪುನರ್‌ ಸಂಯೋಜನೆ‘ ಹೆಸರಿನ ಈ ಕರಡು ನೀತಿಯನ್ನು ರಾಷ್ಟ್ರೀಯ ಭದ್ರತಾ ಪರಿಷತ್ತು ರೂಪಿಸಿದೆ. ಪ್ರಧಾನಿ ಕಚೇರಿ ಸಲಹೆ ಮೇರೆಗೆ ಈ ಕರಡು ಸಿದ್ಧಗೊಂಡಿದೆ. ಇದಕ್ಕೆ ಸಣ್ಣ ಪುಟ್ಟ ಪರಿಷ್ಕರಣೆಗಳ ಬಳಿಕ ರಾಜ್ಯಪಾಲರ ಜತೆ ಚರ್ಚಿಸಿ ಅಂತಿಮ ರೂಪ ನೀಡಲಾಗುತ್ತದೆ.

ಉಗ್ರ ಕೃತ್ಯಗಳನ್ನು ತೊರೆದು ಮುಖ್ಯ ವಾಹಿನಿಗೆ ಬರುವವರಿಗೆ ’ಸುರಕ್ಷಿತ ಮತ್ತು ಸಂತಸದ ಜೀವನ‘ ನಡೆಸುವಂತೆ ಮಾಡುವುದು ಈ ಕರಡಿನ ಪ್ರಾಥಮಿಕ ಆದ್ಯತೆ. ಶರಣಾದ ಅಥವಾ ಶರಣಾಗುವ ಉಗ್ರರು ಶಿಕ್ಷೆಯಿಂದ ಕ್ಷಮಾದಾನ ಪಡೆದ ನಂತರ ಸರ್ಕಾರಿ ಹುದ್ದೆಯನ್ನೇನಾದರೂ ಪಡೆದರೆ, ಹಿಂದಿನ ಕೃತ್ಯಗಳ ಕಾರಣಕ್ಕೆ ಅವರನ್ನು ಅನರ್ಹಗೊಳಿಸಬಾರದು. ಅಂತೆಯೇ ಶರಣಾದ ಉಗ್ರರ ಮಕ್ಕಳ ಶಿಕ್ಷಣಕ್ಕಾಗಿ ಅನುದಾನ ಒದಗಿಸಬೇಕು ಎಂದು ಈ ಕರಡಿನಲ್ಲಿ ಹೇಳಲಾಗಿದೆ.

 

Post Comments (+)