‘ರಫೇಲ್‌ ಚರ್ಚೆಗೆ ಏಕೆ ಬರಲಿಲ್ಲ’

ಶುಕ್ರವಾರ, ಮೇ 24, 2019
29 °C

‘ರಫೇಲ್‌ ಚರ್ಚೆಗೆ ಏಕೆ ಬರಲಿಲ್ಲ’

Published:
Updated:

ನವದೆಹಲಿ: ‘ರಫೇಲ್‌ ವಹಿವಾಟು ಕುರಿತು ಚರ್ಚೆಗೆ ಬನ್ನಿ ಎಂಬ ನನ್ನ ಸವಾಲನ್ನು ಪ್ರಧಾನಿ ನರೇಂದ್ರ ಮೋದಿ ಏಕೆ ಸ್ವೀಕರಿಸುತ್ತಿಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಶ್ನಿಸಿದರು. ಲೋಕಸಭೆಯ ಕೊನೆಯ ಹಂತದ ಮತದಾನದ ಪ್ರಚಾರದ ಕೊನೆಯ ದಿನ ಅವರು ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. 

‘ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸರ್ಕಾರ ರಚಿಸಲು ವಿರೋಧಪಕ್ಷಗಳು ಒಗ್ಗೂಡಲಿವೆ’ ಎಂದು ರಾಹುಲ್‌ ಹೇಳಿದರು.

ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ತೆಲುಗು ದೇಶಂ ಸೇರಿದಂತೆ ಯಾವುದೇ ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಸರ್ಕಾರ ರಚನೆಗೆ ವಿರೋಧಪಕ್ಷಗಳ ಕಾರ್ಯತಂತ್ರವನ್ನು ಬಹಿರಂಗ ಪಡಿಸಲು ನಿರಾಕರಿಸಿದ ಅವರು, ‘ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಸೇರಿದಂತೆ ಹಿರಿಯರ ಮಾರ್ಗದರ್ಶನವನ್ನು ಕಾಂಗ್ರೆಸ್‌ ಪಕ್ಷ ಪಡೆಯಲಿದೆ’ ಎಂದು ತಿಳಿಸಿದರು.

ಸರ್ಕಾರ ರಚಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಸೋನಿಯಾ ಗಾಂಧಿ ಪಾತ್ರವೇನು ಎಂಬ ಪ್ರಶ್ನೆಗೆ, ‘ದೇಶದ ಜನರು ಏನು ತೀಪು ನೀಡಿದ್ದಾರೆ ಎಂದು ನಾನು ಮುಂದಾಗಿ ಅಂದಾಜಿಸಲು ಹೋಗುವುದಿಲ್ಲ. ನಮ್ಮ ಮುಂದಿನ ನಡೆಯೂ ಮೇ 23ರಂದೇ ನಿರ್ಧಾರವಾಗಲಿದೆ’ ಎಂದು ಹೇಳಿದರು.

ದೇಶವನ್ನು ಮುನ್ನಡೆಸಲು ಜನರು ನೀಡಿದ್ದ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಕಳೆದುಕೊಂಡರು ಎಂದ ಅವರು, ‘ನಾನು ದೇಶದ ಮತದಾರರ ತೀರ್ಪನ್ನು ಈಗಲೇ ಅಂದಾಜಿಸಲು ಬಯಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ತಪ್ಪಿಸಿಕೊಳ್ಳಲು ಅವರಿಗಿದ್ದ (ಮೋದಿ) ಶೇ 90ರಷ್ಟು ಅವಕಾಶದ ಬಾಗಿಲುಗಳನ್ನು ನಾವು ಮುಚ್ಚಿದ್ದೆವು. ಉಳಿದ 10ರಷ್ಟು ಅವಕಾಶಗಳನ್ನು ವಿರೋಧಪಕ್ಷಗಳನ್ನು ಟೀಕಿಸುವ ಮೂಲಕ ಅವರೇ ಕಳೆದುಕೊಂಡರು’ ಎಂದು ಹೇಳಿದರು.

‘ಈ ಚುನಾವಣೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತಿಯಾಗಿತ್ತು. ಮೋದಿ  ಕಾರ್ಯಕ್ರಮಗಳ ಕಾರ್ಯ
ಸೂಚಿ ಆಧರಿಸಿಯೇ ಆಯೋಗ ಆದೇಶ ನೀಡುತ್ತಿತ್ತು’ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !