ಶನಿವಾರ, ಸೆಪ್ಟೆಂಬರ್ 21, 2019
21 °C

ಜಾಖಡ್‌ ಪತ್ನಿ ಹೆಸರಲ್ಲಿ ಸ್ವಿಸ್‌ ಖಾತೆ

Published:
Updated:
Prajavani

ಗುರುದಾಸ್‌ಪುರ: ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಜಾಖಡ್‌ ಅವರು ತಮ್ಮಲ್ಲಿ ₹1.53 ಕೋಟಿ ಮೌಲ್ಯದ ಚರಾಸ್ತಿ ಇದೆ ಎಂದು ಘೋಷಿಸಿದ್ದಾರೆ. ಜತೆಗೆ, ತಮ್ಮ ಹೆಂಡತಿ ಸಿಲ್ವಿಯಾ ಜಾಖಡ್‌ ಹೆಸರಲ್ಲಿ ಸ್ವಿಸ್‌ ಬ್ಯಾಂಕ್‌ ಖಾತೆ ಇದೆ. ಈ ಖಾತೆಯಲ್ಲಿ ₹7.37 ಕೋಟಿ ಠೇವಣಿ ಇದೆ ಎಂದೂ ಅವರು ಹೇಳಿದ್ದಾರೆ. 

ಮಧ್ಯ ಪ್ರದೇಶದ ಮಾಜಿ ರಾಜ್ಯಪಾಲ ಬಲರಾಂ ಜಾಖಡ್‌ ಮಗನಾಗಿರುವ ಸುನಿಲ್‌ ಅವರು ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ ₹1.23 ಕೋಟಿ ಠೇವಣಿ ಇರಿಸಿದ್ದಾಗಿಯೂ ತಿಳಿಸಿದ್ದಾರೆ. 

ಝರ್ಚರ್‌ ಕಂಟೋನಲ್‌ ಬ್ಯಾಂಕ್‌ನಲ್ಲಿ ಸಿಲ್ವಿಯಾ ಅವರ ಖಾತೆ ಇದೆ. ಆ ಬ್ಯಾಂಕ್‌ನ ವೆಬ್‌ಸೈಟ್‌ ಪ್ರಕಾರ, ಸ್ವಿಟ್ಜರ್‌ಲ್ಯಾಂಡ್‌
ನ ಅತ್ಯಂತ ದೊಡ್ಡ ಬ್ಯಾಂಕ್‌ ಇದು. ಗುರುದಾಸ್‌ಪುರದ ಹಾಲಿ ಸಂಸದರಾಗಿರುವ ಸುನಿಲ್‌ ಅವರು ಮರುಆಯ್ಕೆ ಬಯಸಿದ್ದಾರೆ. ಬಾಲಿವುಡ್‌ ನಟ ಸನ್ನಿಡಿಯೋಲ್‌ ಅವರು ಇಲ್ಲಿ ಬಿಜೆಪಿ ಅಭ್ಯರ್ಥಿ. ಇದೇ  ಭಾನುವಾರ ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. 

Post Comments (+)