ಆಟೊ ಟಿಪ್ಪರ್‌ ಹಗರಣ ತನಿಖೆಗೆ ಆಗ್ರಹ

ಭಾನುವಾರ, ಮೇ 26, 2019
32 °C

ಆಟೊ ಟಿಪ್ಪರ್‌ ಹಗರಣ ತನಿಖೆಗೆ ಆಗ್ರಹ

Published:
Updated:

ಬೆಂಗಳೂರು: ಬಿಬಿಎಂಪಿಯಲ್ಲಿ ಆಟೊ ಟಿಪ್ಪರ್‌ಗಳ ಹೆಸರಿನಲ್ಲಿ ನಡೆದಿರುವ ಅವ್ಯವಹಾರ ಕುರಿತು ತನಿಖೆ ನಡೆಸಬೇಕೆಂದು ಆಮ್ಮ್‌ ಆದ್ಮಿ ಪಕ್ಷ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮೋಹನ್‌ ದಾಸರಿ, ‘ನಗರದ 198 ವಾರ್ಡ್‌ಗಳಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿಗಾಗಿ 750 ಮನೆಗಳಿಗೆ 1 ಆಟೊದಂತೆ ಒಟ್ಟು 4,466 ಆಟೊಗಳು ಅಗತ್ಯವಿದೆ. ಸದ್ಯ 2,580 ಆಟೊಗಳು ಕೆಲಸ ಮಾಡುತ್ತಿರುವ ದಾಖಲೆಗಳಿವೆ’ ಎಂದರು.

‘ಒಂದು ಆಟೊ ಟಿಪ್ಪರ್‌ಗೆ ಪ್ರತಿ ತಿಂಗಳು ₹57 ಸಾವಿರ ವ್ಯಯ ಮಾಡಲಾಗುತ್ತಿದ್ದು, 1,230 ಆಟೊ ಟಿಪ್ಪರ್‌ಗಳಿಗೆ ತಗಲುವ ವೆಚ್ಚ ₹80 ಕೋಟಿ. ಆದರೆ, ದಾಖಲೆಯಲ್ಲಿರುವ 2,580 ಆಟೊ ಟಿಪ್ಪರ್‌ಗಳಿಗೆ ವರ್ಷಕ್ಕೆ ಸುಮಾರು ₹176.5 ಕೋಟಿ ನೀಡಲಾಗುತ್ತದೆ. ಆದರೆ, ಕೆಲಸ ಮಾಡದ 1350 ಆಟೊ ಟಿಪ್ಪರ್‌ಗಳ ಹೆಸರಿನಲ್ಲಿ ಸುಳ್ಳು ಲೆಕ್ಕ ಪತ್ರಗಳನ್ನು ಸೃಷ್ಟಿಸಿ ಗುತ್ತಿಗೆದಾರರು ಕೋಟ್ಯಂತರ ಹಣ ದೋಚುತ್ತಿದ್ದಾರೆ’ ಎಂದು ಆರೋಪಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !