₹ 40 ಲಕ್ಷದ 1.2ಕೆ.ಜಿ ಚಿನ್ನ ವಶ

ಬುಧವಾರ, ಮೇ 22, 2019
32 °C
ಚಿನ್ನ ಅಕ್ರಮ ಸಾಗಣೆ: ನಾಲ್ವರು ಮಹಿಳೆಯರ ಬಂಧನ

₹ 40 ಲಕ್ಷದ 1.2ಕೆ.ಜಿ ಚಿನ್ನ ವಶ

Published:
Updated:

ಬೆಂಗಳೂರು: ಒಳ ಉಡುಪಿನಲ್ಲಿ ಚಿನ್ನ ಬಚ್ಚಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಸೇರಿದಂತೆ ನಾಲ್ವರು ಮಹಿಳೆಯರು ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. 

ಬಂಧಿತರಲ್ಲಿ ಇಬ್ಬರು ಶ್ರೀಲಂಕಾದ ಪ್ರಜೆಗಳು. ಮತ್ತಿಬ್ಬರು ಭಾರತದ ಮಹಿಳೆಯರು. ಆರೋಪಿಗಳಿಂದ ₹ 40 ಲಕ್ಷ ಮೌಲ್ಯದ 1.2 ಕೆ.ಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಗಟ್ಟಿಯನ್ನು ಗುಂಡು ಹಾಗೂ ಪೇಸ್ಟ್‌ ಆಗಿ ಪರಿವರ್ತಿಸಿ ದೇಶದೊಳಕ್ಕೆ ತರಲಾಗುತಿತ್ತು. ನಾಲ್ವರು ಮಹಿಳೆಯರನ್ನು ಪ್ರತ್ಯೇಕವಾಗಿ ಬಂಧಿಸಲಾಗಿದೆ. 

ಏರ್‌ ಇಂಡಿಯಾ ವಿಮಾನ– 978ನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದ ಮಹಿಳೆಯೊಬ್ಬರು 425.57 ಗ್ರಾಂ ಬೆಳ್ಳಿ ಲೇಪನವಿದ್ದ ಕಚ್ಚಾ ಚಿನ್ನದ ಚೈನ್‌ ಧರಿಸಿದ್ದರು. ಅನುಮಾನಗೊಂಡು ಅವರನ್ನು ವಿಚಾರಿಸಿದಾಗ ಚಿನ್ನ ಕಳ್ಳಸಾಗಣೆ ಪ್ರಕರಣ ಪತ್ತೆಯಾಯಿತು. ಮಹಿಳೆಯನ್ನು ಬಂಧಿಸಿ ₹14.24 ಲಕ್ಷದ ಚೈನ್‌ ವಶಪಡಿಸಿಕೊಳ್ಳಲಾಗಿದೆ.

ಮಸ್ಕತ್‌ನಿಂದ ಇದೇ ವಿಮಾನದಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರು ಚೈನನ್ನು ನೀಡಿದ್ದರು ಎಂಬ ಸಂಗತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ತಿಂಗಳ 14ರಂದು ಮಹಿಳೆಯನ್ನು ಬಂಧಿಸಲಾಗಿದೆ. ಗುರುವಾರ ಕೊಲಂಬೊದಿಂದ ಬೆಂಗಳೂರಿಗೆ ಯು– 1173 ವಿಮಾನದಲ್ಲಿ ಪ್ರಯಾಣಿಸಿದ ಇಬ್ಬರು ಶ್ರೀಲಂಕಾ ಮಹಿಳೆಯರಿಂದ ಕ್ರಮವಾಗಿ 98.930 ಗ್ರಾಂ ಮತ್ತು 264.71 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ 13.5 ಲಕ್ಷ. 

75 ವರ್ಷದ ಹಿರಿಯ ಮಹಿಳೆ ಚಿನ್ನದ ಗಟ್ಟಿಯನ್ನು ಗುಂಡುಗಳಾಗಿ ಪರಿವರ್ತಿಸಿ ಹೊಟ್ಟೆಯೊಳಗೆ ಸಾಗಿಸುತ್ತಿದ್ದರು. ಅವರ ಬಳಿ ಒಂದು ಜೊತೆ ಕಿವಿ ಓಲೆ ಸಿಕ್ಕಿದೆ. 44 ವರ್ಷದ ಮತ್ತೊಬ್ಬ ಮಹಿಳೆ ಚಿನ್ನದ ಗುಂಡುಗಳನ್ನು ಕಪ್ಪು ಇನ್ಸೂಲಿನ್‌ ಟೇಪಿನಲ್ಲಿ ಸುತ್ತಿ, ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ಸಾಗಿಸುತ್ತಿದ್ದರು. ಈ ಮಹಿಳೆ ಬಳಿ ಒಂದು ಬ್ರೇಸ್‌ಲೆಟ್‌ ಮತ್ತು ಒಂದು ಜೊತೆ ಕಿವಿ ಓಲೆಯೂ ದೊರೆತಿದೆ. 

ಈ ಮಹಿಳೆಯರು ಕಳ್ಳ ಸಾಗಣೆದಾರರ ತಂಡಕ್ಕೆ ಸೇರಿದವರೇ; ಪರಸ್ಪರರು ಪರಿಚಿತರೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೆಐಎ ಏರ್‌ಪೋರ್ಟ್‌ ಮತ್ತು ಏರ್‌ ಕಾರ್ಗೊ ಕಾಂಪ್ಲೆಕ್ಸ್‌ ಕಸ್ಟಮ್ಸ್‌ ಕಚೇರಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಅಂದೇ ಕೊಲಂಬೊದಿಂದ ಬೆಂಗಳೂರಿಗೆ ಪ್ರಯಾಣಿಸಿದ ಭಾರತದ ಮಹಿಳೆಯಿಂದ ₹ 13.30 ಲಕ್ಷ ಮೌಲ್ಯದ 402.35 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಚಿನ್ನವನ್ನು ಪೇಸ್ಟ್‌ ಆಗಿ ಪರಿವರ್ತಿಸಿ ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡು ತರುತ್ತಿದ್ದರು ಎನ್ನಲಾಗಿದೆ. ತನಿಖೆ ನಡೆಯುತ್ತಿದೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !