ಮಂಗಳವಾರ, ಜೂಲೈ 7, 2020
28 °C

ಗುರುವಾರ, 19–5–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣ್ವಸ್ತ್ರ: ‘ಮೊದಲ ದಾಳಿ’ ನಿಷೇಧಕ್ಕೆ ರಾವ್ ಆಗ್ರಹ

ವಾಷಿಂಗ್ಟನ್, ಮೇ 18 (ಪಿಟಿಐ, ಯುಎನ್‌ಐ)– ಪರಮಾಣು ಅಸ್ತ್ರಗಳ ಮೊದಲ ಬಳಕೆಯನ್ನು ನಿಷೇಧಿಸುವ ಒಪ್ಪಂದ ಯಾರಿಗೆ ಬರಬೇಕು ಹಾಗೂ ಪರಮಾಣು ಅಸ್ತ್ರಗಳ ನಿಶಸ್ತ್ರೀಕರಣಕ್ಕಾಗಿ ಬಹುಪಕ್ಷೀಯ ಸಂಧಾನವನ್ನು ಇದೇ ಕಾಲದಲ್ಲಿ ಹಮ್ಮಿಕೊಳ್ಳಬೇಕು ಎಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿ ಅಮೆರಿಕ ಕಾಂಗ್ರೆಸ್ಸಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಾ ಕರೆ ನೀಡಿದರು.

‘ಸಾಮೂಹಿಕ ನಾಶದ ಅಸ್ತ್ರಗಳಿಂದ ವಿಶ್ವವನ್ನು ವಿಮೋಚನೆಗೊಳಿಸಬೇಕಾದರೆ, ಹೊಸ ವಿಶ್ವ ವ್ಯವಸ್ಥೆ ನಿರ್ಮಾಣವಾಗಬೇಕು. ಸಮಾನತೆ ಹಾಗೂ ಪಕ್ಷಪಾತ ರಹಿತವಾದ ಸಾರ್ವತ್ರಿಕ ತತ್ವಗಳು ಈ ಹೊಸ ವ್ಯವಸ್ಥೆಗೆ ತಳಹದಿಯಾಗಬೇಕು. ಭದ್ರತೆಯನ್ನು ಹೆಚ್ಚಿಸುವ ಸಾಧನವಾಗಿ ಈ ವ್ಯವಸ್ಥೆ ರೂಪಿತವಾಗಬೇಕು’ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೊಡ ನೀರಿಗೆ 2 ರೂ.: ಬೆಂಗಳೂರಿನಲ್ಲಿ ನೀರಿನ ಬವಣೆ

ಬೆಂಗಳೂರು, ಮೇ 18– ಬೀದಿ ಮೇಲೆ ಬಟ್ಟೆ, ಪಾತ್ರೆ, ಹಣ್ಣು, ತರಕಾರಿ ಮಾರುವುದು ಸಾಮಾನ್ಯ. ಈಗ ಈ ವಸ್ತು
ಗಳ ಸಾಲಿಗೆ ನೀರೂ ಸೇರಿದೆ. ಕೆಲವರು ನೀರು ತುಂಬಿದ ಕೊಡಗಳನ್ನು ಸೈಕಲ್‌ನಲ್ಲಿ ಕಟ್ಟಿಕೊಂಡು ಮಾರಾಟ ಮಾಡು
ತ್ತಿದ್ದಾರೆ. ಇದು ನೀರಿಗೆ ಬರವಿರುವ ಉತ್ತರ ಕರ್ನಾಟಕದ ಯಾವುದೋ ಹಳ್ಳಿಯ ಕಥೆಯಲ್ಲ. ರಾಜ್ಯದ ರಾಜಧಾನಿ ಎಂಬ ಹಣೆಪಟ್ಟಿಯೊಂದಿಗೆ ಮೆರೆಯುತ್ತಿರುವ ಬೆಂಗಳೂರಿನ ಬಡಾವಣೆಯೊಂದರಲ್ಲಿ ನಿತ್ಯ ನಡೆಯುತ್ತಿರುವ ಸತ್ಯ ಘಟನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.