ಕಂಪ್ಯೂಟರ್‌ ವಿಜ್ಞಾನ, ಏರೊಸ್ಪೇಸ್‌ಗೆ ಬೇಡಿಕೆ

ಗುರುವಾರ , ಜೂನ್ 20, 2019
26 °C

ಕಂಪ್ಯೂಟರ್‌ ವಿಜ್ಞಾನ, ಏರೊಸ್ಪೇಸ್‌ಗೆ ಬೇಡಿಕೆ

Published:
Updated:

ಮೈಸೂರು: ‘ಬಾಹ್ಯಾಕಾಶದಿಂದ ಹಿಡಿದು ಭೂಮಿ ಆಳದವರೆಗಿನ ಕೆಲಸಗಳಿಗೆ ಎಂಜಿನಿಯರಿಂಗ್‌ ಜ್ಞಾನದ ಅವಶ್ಯವಿದೆ. ಹೀಗಾಗಿ, ಎಂಜಿನಿಯರ್‌ಗಳಿಗೆ ಬೇಡಿಕೆ ಇದ್ದೇ ಇದೆ’

–ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ (ಎನ್‌ಐಇ) ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಎಸ್‌.ಗಣೇಶ್‌ ಪ್ರಸಾದ್‌ ಅವರು ಎಂಜಿನಿಯರಿಂಗ್‌ ಕ್ಷೇತ್ರದಲ್ಲಿನ ಅವಕಾಶಗಳ ಕುರಿತು ಸಮಗ್ರ ನೋಟ ಬೀರುವ ಮುನ್ನ ನೀಡಿದ ಪೀಠಿಕೆ ಇದು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಅವರು ಎಂಜಿನಿಯರಿಂಗ್‌ ಕೋರ್ಸ್‌ಗಳು, ಅದರಲ್ಲಿರುವ ಉದ್ಯೋಗಾವಕಾಶಗಳು, ಯಾವ ರೀತಿ ಕೋರ್ಸ್‌ ಹಾಗೂ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪವರ್‌ ಪಾಯಿಂಟ್‌ ಪ್ರಾಜೆಕ್ಟರ್‌ ಮೂಲಕ ವಿವರಿಸುತ್ತಾ ವಿದ್ಯಾರ್ಥಿಗಳ ಮನಸ್ಸಿನ ಆಳಕ್ಕೆ ಇಳಿದರು. ರಾಕೆಟ್‌ ಉಡಾವಣೆ ಉದಾಹರಣೆಯಾಗಿಟ್ಟುಕೊಂಡು ‘ಹೇಗೆ ವಿವಿಧ ಎಂಜಿನಿಯರಿಂಗ್‌ ಕೋರ್ಸ್‌ಗಳ ಅಗತ್ಯವಿದೆ’ ಎಂಬುದನ್ನು ವಿವರಿಸಿದರು.

‘ಪ್ರತಿ ಎಂಜಿನಿಯರಿಂಗ್‌ ವಿಭಾಗದಲ್ಲಿ ಉದ್ಯೋಗಾವಕಾಶಗಳು ಇವೆ. ಸದ್ಯಕ್ಕೆ ಕಂಪ್ಯೂಟರ್‌ ವಿಜ್ಞಾನ ಹಾಗೂ ಏರೊಸ್ಪೇಸ್‌ ಎಂಜಿನಿಯರಿಂಗ್‌ ಬಹು ಬೇಡಿಕೆ ಇರುವ ವಿಭಾಗಗಳು. ಎಂಜಿನಿಯರಿಂಗ್‌ನ ಯಾವುದೇ ವಿಭಾಗವಾದರೂ ಶ್ರದ್ಧೆ ಹಾಗೂ ಶ್ರಮ ಅಗತ್ಯ’ ಎಂದರು.

‘ಕಾಲೇಜು ಆಯ್ಕೆ ಮಾಡಿಕೊಳ್ಳುವ ಮೊದಲು ಗುಣಮಟ್ಟ ಪರಿಶೀಲಿಸಿ. ದೇಶದಲ್ಲಿ ಸಾವಿರಾರು ಎಂಜಿನಿಯರಿಂಗ್‌ ಕಾಲೇಜುಗಳಿವೆ. ಪ್ರತಿವರ್ಷ 15 ಲಕ್ಷ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹೊರಬರುತ್ತಿದ್ದಾರೆ. ಕೆಲ ಕಾಲೇಜುಗಳಲ್ಲಿ ಗುಣಮಟ್ಟದ ಬೋಧಕ ಸಿಬ್ಬಂದಿಯೇ ಇರುವುದಿಲ್ಲ. ಹೀಗಾಗಿ, ಕಾಲೇಜುಗಳ ಮಾನ್ಯತೆ ಪರಿಶೀಲನೆ ಅಗತ್ಯ. 10 ವರ್ಷಗಳ ನಂತರ ನೀವು ಏನಾಗಲಿದ್ದೀರಿ ಎಂಬುದರ ಖಚಿತ ಯೋಜನೆಯನ್ನು ಹೊಂದಿದ್ದರೆ ಕೋರ್ಸ್‌ ಆಯ್ಕೆ ಸುಲಭವಾಗುತ್ತದೆ’ ಎಂದು ಸಲಹೆ ನೀಡಿದರು.

‘ಎಂಜಿನಿಯರಿಂಗ್ ಮುಗಿದ ಮೇಲೆ ನಾಗರಿಕ ಸೇವಾ ಪರೀಕ್ಷೆ ಎದುರಿಸಬಹುದು. ಇಲ್ಲವೇ ಬೋಧಕ ವೃತ್ತಿಯನ್ನು ಕೂಡ ಮಾಡಬಹುದು’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !