ಹಿರಿಯ ಕಲಾವಿದ ರಾಮದಾಸ ಅಡ್ಯಂತಾಯ ನಿಧನ

ಬುಧವಾರ, ಜೂನ್ 26, 2019
28 °C

ಹಿರಿಯ ಕಲಾವಿದ ರಾಮದಾಸ ಅಡ್ಯಂತಾಯ ನಿಧನ

Published:
Updated:
Prajavani

ಮೈಸೂರು:  ಹಿರಿಯ ಕಲಾವಿದ, ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ)ಯ ನಿವೃತ್ತ ಡೀನ್ ರಾಮದಾಸ ಅಡ್ಯಂತಾಯ (72) ಅವರು ಶನಿವಾರ ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ನಿಧನರಾದರು.

ಇವರಿಗೆ ಪತ್ನಿ ಸಬಿತಾ ರಾಮದಾಸ, ಪುತ್ರ ಎಂಜಿನಿಯರ್ ಮಾನುಷ್ ಅಡ್ಯಂತಾಯ, ಪುತ್ರಿ ವಾಸ್ತುಶಿಲ್ಪಿ ಲಿಪಿ ಅಡ್ಯಂತಾಯ ಇದ್ದಾರೆ.

ಮಂಗಳೂರಿನ ಪಟ್ಣಮೊಗರಿನವರಾದ ರಾಮದಾಸ, ಮೈಸೂರಿನಲ್ಲಿ ನೆಲೆಸಿದ್ದರು. ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯಲು ಕಳೆದ 15ರಂದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.

1983ರಿಂದ 2005ರವರೆಗೆ ಕಾವಾದಲ್ಲಿ ಬೋಧಕ ಸಿಬ್ಬಂದಿಯಾಗಿ, ಡೀನ್‌ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಚಿತ್ರಕಲಾವಿದರಾಗಿದ್ದ ಅವರು ಚಿತ್ರಕಲೆ ಕುರಿತು ಕನ್ನಡದಲ್ಲಿ ಪ್ರಕಟಿಸಿದ ‘ಧೃತ್‌ಕಲೆ’ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇವರಿಗೆ 2002ರಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿ ವತಿಯಿಂದ ಚಿತ್ರಕಲೆಗಾಗಿ ‘ರಾಷ್ಟ್ರಪ್ರಶಸ್ತಿ’, 2000ದಲ್ಲಿ ರಾಜ್ಯ ಲಲಿತಕಲಾ ಅಕಾಡೆಮಿ ವತಿಯಿಂದ ‘ಗೌರವ ಪ್ರಶಸ್ತಿ’ ಸಂದಿವೆ.  ಜೆಎಸ್‌ಎಸ್‌ ಮಹಾವಿದ್ಯಾಪೀಠದ ವತಿಯಿಂದ ನೀಡಲಾಗುವ 2012ನೇ ಸಾಲಿನ ‘ಕಲಾಗುರು ಡಿ.ವಿ.ಹಾಲಭಾವಿ’ ಗೌರವ ಪ್ರಶಸ್ತಿಗೆ ಭಾಜನರಾಗಿದ್ದರು. 

ಭಾನುವಾರ ಮಧ್ಯಾಹ್ನ ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂಪರ್ಕಕ್ಕೆ: 9481426957.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !