ಶನಿವಾರ, ಆಗಸ್ಟ್ 8, 2020
22 °C

ಅಮೆರಿಕ ಜತೆ ಯುದ್ಧ ಇಲ್ಲ: ಇರಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಹರಾನ್‌: ಅಮೆರಿಕ ಜತೆ ಯುದ್ಧ ನಡೆಸುವ ಸಾಧ್ಯತೆಗಳನ್ನು ಇರಾನ್‌ ತಳ್ಳಿ ಹಾಕಿದೆ. ‘ಯುದ್ಧವನ್ನು ಇರಾನ್‌ ವಿರೋಧಿಸುತ್ತಿದೆ. ಯುದ್ಧ ನಡೆಯುವುದಿಲ್ಲ. ನಮಗೆ ಯುದ್ಧ ಬೇಕಾಗಿಲ್ಲ. ನಮ್ಮ ಜತೆ ಸಂಘರ್ಷ ನಡೆಸಬೇಕು ಎನ್ನುವ ಭ್ರಮೆಯಲ್ಲೂ ಯಾರು ಇರಬಾರದು’ ಎಂದು ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್‌ ಜಾವೇದ್‌ ಝರೀಫ್‌ ತಿಳಿಸಿದ್ದಾರೆ.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೂ ಯದ್ಧ ಬೇಕಾಗಿಲ್ಲ. ಆದರೆ, ಅಮೆರಿಕವನ್ನು ಬಲಿಷ್ಠಗೊಳಿಸಬೇಕು ಎನ್ನುವ ಭ್ರಮೆಯಲ್ಲಿರುವ ಕೆಲವರು ಟ್ರಂಪ್‌ ಅವರನ್ನು ಪ್ರಚೋದಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. 2015ರ ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕ ಇರಾನ್‌ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದ ಬಳಿಕ ಉಭಯ ದೇಶಗಳ ಸಂಬಂಧಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿತ್ತು.

‘ಅಮೆರಿಕದ ಜತೆ ಸಂಪೂರ್ಣವಾಗಿ ಬೇಹುಗಾರಿಕೆಯ ಯುದ್ದದಲ್ಲಿ ಸದ್ಯಕ್ಕೆ ತೊಡಗಿದ್ದೇವೆ. ಇದು ಮಾನಸಿಕ ಯುದ್ಧ, ಸೈಬರ್‌ ಕಾರ್ಯಾಚರಣೆ, ಸೇನೆಯನ್ನು ನಿಯೋಜಿಸುವುದು ಮತ್ತು ಭೀತಿ ಮೂಡಿಸುವುದಾಗಿದೆ’ ಎಂದು ಇರಾನ್‌ ಸೇನೆ ಮುಖ್ಯಸ್ಥ ಹೊಸೈನ್‌ ಸಲಾಮಿ ಅವರು ಶನಿವಾರ ಹೇಳಿಕೆ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು