ಕಸ ಸಮರ್ಪಕ ನಿರ್ವಹಣೆಗೆ ಒಬ್ಬರಿಗೇ ಗುತ್ತಿಗೆ: ಮೇಯರ್‌

ಬುಧವಾರ, ಜೂನ್ 26, 2019
28 °C

ಕಸ ಸಮರ್ಪಕ ನಿರ್ವಹಣೆಗೆ ಒಬ್ಬರಿಗೇ ಗುತ್ತಿಗೆ: ಮೇಯರ್‌

Published:
Updated:

ಬೆಂಗಳೂರು: ವಾರ್ಡ್‌ನಲ್ಲಿ ಹಸಿ ಕಸ, ಒಣ ಕಸ ಹಾಗೂ ಬಲ್ಕ್‌ ಜನರೇಟರ್‌ಗಳಿಂದ ಕಸ ಸಂಗ್ರಹಣೆ ಹಾಗೂ ವಿಲೇವಾರಿಯನ್ನು ಒಬ್ಬರೇ ಗುತ್ತಿಗೆದಾರರಿಗೆ ನೀಡಿದರೆ ಸಮರ್ಪಕ ಘನತ್ಯಾಜ್ಯ ವಿಲೇವಾರಿ ಸಾಧ್ಯ ಎಂದು ಮೇಯರ್‌ ಗಂಗಾಂಬಿಕೆ ಹೇಳಿದ್ದಾರೆ.

‘ಒಣ ತ್ಯಾಜ್ಯ ಸಂಗ್ರಹ ಹಾಗೂ ಬಲ್ಕ್‌ ಜನರೇಟರ್‌ಗಳಿಂದ ಕಸ ಸಂಗ್ರಹಕ್ಕೆ ಪ್ರತ್ಯೇಕವಾಗಿ ಗುತ್ತಿಗೆದಾರರನ್ನು ನೇಮಿಸಿದರೆ ಏಕಮಾತ್ರ ರೀತಿಯಲ್ಲಿ ಕಸ ಸಂಗ್ರಹ ಸಾಧ್ಯವಿಲ್ಲ. ಪ್ರತಿ ವಾರ್ಡ್‌ಗೆ ಈ ರೀತಿ ಮೂವರು ಗುತ್ತಿಗೆದಾರರನ್ನು ನೇಮಿಸಿದರೆ ಇವರ ಮೇಲ್ವಿಚಾರಣೆ ಹಾಗೂ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ಕಷ್ಟವಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಎಂಟು ಕಸ ಸಂಸ್ಕರಣಾ ಘಟಕಗಳು ಹಾಗೂ ಬೆಲ್ಲಹಳ್ಳಿ ಭೂಭರ್ತಿ ಪ್ರದೇಶದ ಸಾಮರ್ಥ್ಯ ಸುಮಾರು 5,300 ಟನ್‌ಗಳಷ್ಟಿದ್ದು, ಸಾಮರ್ಥ್ಯಕ್ಕೆ ತಕ್ಕಂತೆ ಕಸ ಸಂಗ್ರಹ ಮಾಡಲು ಕ್ರಮ ಜರುಗಿಸಿದರೆ ಹೊಸ ಘಟಕಗಳ ಸ್ಥಾಪಿಸಬೇಕಾದ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !