ಪೀಠ ತೊರೆದಿದ್ದ ಸ್ವಾಮೀಜಿ ಮಠಕ್ಕೆ ದಿಢೀರ್ ಭೇಟಿ: ಗೊಂದಲ

ಭಾನುವಾರ, ಜೂನ್ 16, 2019
28 °C
ಅಳವಂಡಿ ಮಠಕ್ಕೆ ಕಿರಿಯ ಸ್ವಾಮೀಜಿ ನೇಮಕ: ಅಸಮಾಧಾನ

ಪೀಠ ತೊರೆದಿದ್ದ ಸ್ವಾಮೀಜಿ ಮಠಕ್ಕೆ ದಿಢೀರ್ ಭೇಟಿ: ಗೊಂದಲ

Published:
Updated:
Prajavani

ಕೊಪ್ಪಳ: ತಾಲ್ಲೂಕಿನ ಅಳವಂಡಿ ಕಟ್ಟಿಮನಿ ಹಿರೇಮಠ (ಸಿದ್ಧೇಶ್ವರ ಮಠ) ತೊರೆದಿದ್ದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಶನಿವಾರ ಮಠಕ್ಕೆ ದಿಢೀರ್‌ ಭೇಟಿ ನೀಡಿ ತಮ್ಮನ್ನು ಒತ್ತಾಯಪೂರ್ವಕವಾಗಿ ಹೊರಹಾಕಲಾಗಿದೆ ಎಂದು ದೂರಿದರು.

ಏತನ್ಮಧ್ಯೆ ಮಠದ ಉತ್ತರಾಧಿಕಾರಿಯನ್ನಾಗಿ ಬಾಲಕ ಸಿದ್ಧವೀರ ದೇವರು ಎಂಬುವರನ್ನು ಗೋಪ್ಯವಾಗಿ ನೇಮಕ ಮಾಡಿರುವ ವಿಷಯ ಚರ್ಚೆಗೆ ಬಂದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

‘ನಾನು ಯುವತಿಯನ್ನು ಪ್ರೀತಿಸಿದ ವಿಷಯವನ್ನು ಮುಂದಿಟ್ಟುಕೊಂಡು ನನ್ನನ್ನು ಹೆದರಿಸಿ ಮಠದಿಂದ ಹೊರಗೆ ಹಾಕಿದ್ದಾರೆ. ನನ್ನ ತಪ್ಪನ್ನು ಭಕ್ತರ ಮುಂದೆ ಹೇಳಿಕೊಳ್ಳಲು ಕೂಡಾ ಅವಕಾಶ ನೀಡಲಿಲ್ಲ‘ ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅಲವತ್ತುಕೊಂಡರು.

‘ಕೌಟುಂಬಿಕ ಕಲಹ ಮತ್ತು ಸಂಬಂಧಿಕರ ಹಸ್ತಕ್ಷೇಪದಿಂದ ಮಠದ ಕಾರ್ಯಕಲಾಪ ಸುಗಮವಾಗಿ ನಡೆಸಲು ಆಗಲಿಲ್ಲ. ಮನಸ್ಸಿಗೆ ಬೇಸರವಾಗಿದ್ದರಿಂದ ಮಠ ತೊರೆಯಬೇಕಾಯಿತು. ಅಲ್ಲದೆ ಒತ್ತಾಯ ಪೂರ್ವಕವಾಗಿ ನಮ್ಮಿಂದ ಸಹಿ ಹಾಕಿಸಿಕೊಂಡಿದ್ದಾರೆ' ಎಂದು ಆರೋಪಿಸಿದರು. ಆಗ ಮಠದ ಭಕ್ತರು ವಾಗ್ವಾದದಲ್ಲಿ ತೊಡಗಿದರು.

‘ಮಠ ಸಾರ್ವಜನಿಕರ ಸ್ವತ್ತು. ಖಾಸಗಿ ಕುಟುಂಬದ ರೀತಿ ಮಠವನ್ನು ದುರ್ಬಳಕೆ ಮಾಡಲು ಬಿಡುವುದಿಲ್ಲ’ ಎಂದು ಕೆಲ ಭಕ್ತರು ಪಟ್ಟು ಹಿಡಿದರೆ, ‘ಮಠದ ಟ್ರಸ್ಟ್ ಸದಸ್ಯರ ಮೇಲೆ ಎಲ್ಲ ಜವಾಬ್ದಾರಿ ಇದ್ದು, ಇದನ್ನು ಸೌಹಾರ್ದವಾಗಿ ಬಗೆಹರಿಸಬೇಕು’ ಎಂದು ಕೆಲ ಭಕ್ತರು ಆಗ್ರಹಿಸಿದರು. ಯಾವುದೇ ನಿರ್ಧಾರಕ್ಕೆ ಬರದೆ ಸಭೆ ಗದ್ದಲದಲ್ಲಿಯೇ ಮುಗಿಯಿತು.

‘ಮಠಕ್ಕೆ ನೇಮಕಗೊಂಡ ಕಿರಿಯ ಸ್ವಾಮೀಜಿ ಚಿಕ್ಕವರಾಗಿದ್ದು, ಸಿದ್ಧಲಿಂಗ ಶಿವಾಚಾರ್ಯರ ಸೋದರತ್ತೆಯ ಮಗ. ಈ ನೇಮಕಕ್ಕೆ ಉಜ್ಜಯಿನಿ ಶ್ರೀ, ಮಠದ ಭಕ್ತರು ಹಾಗೂ ಟ್ರಸ್ಟ್‌ನ ಕೆಲವು ಸದಸ್ಯರ ಒಪ್ಪಿಗೆ ಕೂಡಾ ಇಲ್ಲ. ಅಲ್ಲದೆ ನೂತನ ಉತ್ತರಾಧಿಕಾರಿ ಹಾಗೂ ಹಿಂದಿನ ಸ್ವಾಮೀಜಿ ಇಬ್ಬರೂ ಮಠದಲ್ಲಿಯೇ ಠಿಕಾಣಿ ಹೂಡಿದ್ದು ಮುಂದೇನಾಗುತ್ತೋ ಗೊತ್ತಿಲ್ಲ’ ಎಂದು ಕೆಲ ಭಕ್ತರು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !