ಕುಡಿಯುವ ನೀರಿಗೆ ಪಕ್ಷಿಗಳ ಪರದಾಟ

ಭಾನುವಾರ, ಜೂನ್ 16, 2019
29 °C

ಕುಡಿಯುವ ನೀರಿಗೆ ಪಕ್ಷಿಗಳ ಪರದಾಟ

Published:
Updated:
Prajavani

ಶಹಾಪುರ: ತಾಲ್ಲೂಕಿನ ಸಗರ ಗ್ರಾಮದ ಶಂಕರರಾಯನಕೆರೆ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿತ್ತು. ಕೆರೆಯಂಗಳ ಬತ್ತಿದೆ. ನೀರಿಗಾಗಿ ಪಕ್ಷಿಗಳು ಪರದಾಡುವಂತೆ ಆಗಿದೆ.

ಕೊನೆ ಪಕ್ಷ ಪಕ್ಷಿಗಳನ್ನು ಉಳಿಸಲು ನೀರನ್ನು ಅರಣ್ಯ ಇಲಾಖೆ ಒದಗಿಸಬೇಕು ಎಂದು ಪಕ್ಷಿಪ್ರೇಮಿ ಮಂಜುನಾಥ ಬಿರಾದಾರ ಮನವಿ ಮಾಡಿದ್ದಾರೆ.

ಸುಮಾರು 2 ಎಕರೆ ಪ್ರದೇಶವನ್ನು ಹೊಂದಿರುವ ಕೆರೆಯಲ್ಲಿ ವಿವಿಧ ತಳಿಯ ಪಕ್ಷಗಳು ಇಲ್ಲಿ ನೆಲೆ ಕಂಡಿವೆ. ಕೆರೆ ಪಕ್ಕದಲ್ಲಿ ಗೂಡು ಕಟ್ಟಿ ಮರಿ ಹಾಕಿವೆ. ಸೂರ್ಯ ದೇವ ಒಡಲಿನಿಂದ ಹೊರ ಬರುತ್ತಿರುವಂತೆ ಕೆರೆಯಂಗಳಕ್ಕೆ ಲಗ್ಗೆ ಹಾಕುತ್ತವೆ. ಅಲ್ಲಲ್ಲಿ ನಿಂತ ನೀರನ್ನು ಕುಡಿಯುತ್ತಲಿವೆ. ಈಗ ಅದು ಮಾಯವಾಗಿದೆ. ಪಕ್ಷಿಗಳಿಗೂ ಬರದ ಬಿಸಿ ತಟ್ಟಿದೆ. ಮನುಷ್ಯರು ಎಲ್ಲಿಯಾದರು ತೆರಳಿ ಕುಡಿಯಲು ನೀರು ತರುತ್ತೇವೆ. ಆದರೆ, ಪಕ್ಷಿಗಳು ಎಲ್ಲಿಂದ ನೀರು ತರಬೇಕು. ಅರಣ್ಯ ಇಲಾಖೆಯು ಇಂದಿಷ್ಟು ಜಾಗೃತಿವಹಿಸಿ ಹೆಚ್ಚು ಸಂಗ್ರಹವಾಗುತ್ತಿರುವ ಪಕ್ಷಗಳು ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಕುಡಿಯುವ ವ್ಯವಸ್ಥೆ ಕಲ್ಲಿಸಬೇಕು. ಕುಡಿಯುವ ನೀರಿನ ಬಳಿ ಒಂದಿಷ್ಟು ಆಹಾರವನ್ನು ಹಾಕಬೇಕು. ಜಿಲ್ಲಾಧಿಕಾರಿ ಇದರ ಬಗ್ಗೆ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !