ಶುಲ್ಕ ಕಟ್ಟದ ಕೇಂದ್ರ ಸಚಿವರು

ಸೋಮವಾರ, ಜೂನ್ 24, 2019
29 °C
ನವದೆಹಲಿಯಲ್ಲಿ ಸರ್ಕಾರಿ ಬಂಗಲೆ ಶುಲ್ಕ ಬಾಕಿ ಉಳಿಸಿಕೊಂಡ ನಾಯಕರು

ಶುಲ್ಕ ಕಟ್ಟದ ಕೇಂದ್ರ ಸಚಿವರು

Published:
Updated:

ನವದೆಹಲಿ: ವಿಜಯ್‌ ಗೊಯಲ್‌, ಪ್ರಕಾಶ್‌ ಜಾವಡೇಕರ್, ನಿರ್ಮಲಾ ಸೀತಾರಾಮನ್, ಸುಷ್ಮಾ ಸ್ವರಾಜ್‌ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಸಚಿವರು ಸರ್ಕಾರಿ ಬಂಗಲೆಯ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ಹೇಳಿದೆ. 

ಅಜಿತ್‌ ಕುಮಾರ್‌ ಸಿಂಗ್‌ ಎಂಬುವರು ಆರ್‌ಟಿಐ ಅಡಿ ಕೇಳಿದ ಪ್ರಶ್ನೆಗೆ ಸಚಿವಾಲಯವು ಈ ಉತ್ತರ ನೀಡಿದೆ. ಮುಖ್ತಾರ್‌ ಅಬ್ಬಾಸ್‌ ನಕ್ವಿ ಮತ್ತು ಜಿತೇಂದ್ರ ಸಿಂಗ್‌ ಕೂಡ ಈ ಪಟ್ಟಿಯಲ್ಲಿದ್ದಾರೆ ಎಂದು ಅದು ಹೇಳಿದೆ. 

ಕಳೆದ ಏಪ್ರಿಲ್‌ 26ರಂದು ಸಚಿವಾಲಯ ಈ ಪ್ರತಿಕ್ರಿಯೆ ನೀಡಿದ್ದು, ಕಳೆದ ಫೆಬ್ರುವರಿವರೆಗಿನ ಶುಲ್ಕವನ್ನು ಈ ಸಚಿವರುಗಳು ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದೆ. 

ಈ ಸಚಿವಾಲಯದಡಿ ಬರುವ ಸರ್ಕಾರಿ ಆಸ್ತಿ ಕುರಿತ ನಿರ್ದೇಶನಾಲಯವು ಕೇಂದ್ರ ಸಚಿವರು ಮತ್ತು ಸಂಸದರಿಗೆ ನವದೆಹಲಿಯಲ್ಲಿ ಬಂಗಲೆಗಳನ್ನು ಹಂಚಿಕೆ ಮಾಡುತ್ತದೆ. 

’ಬಂಗಲೆಯಲ್ಲಿ ಒದಗಿಸಲಾದ ಪೀಠೋಪಕರಣ ಮತ್ತಿತರ ವಸ್ತುಗಳಿಗೆ ಸಂಬಂಧಿಸಿದ ಶುಲ್ಕ ಇದಾಗಿರುತ್ತದೆ‘ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದರು. ಯಾವುದೇ ಬಾಕಿ ಉಳಿಸಿಕೊಳ್ಳದ ಸಚಿವರು ಮತ್ತು ಸಂಸದರಿಗೆ ನಿರ್ದೇಶನಾಲಯವು ‘ಬಾಕಿ ರಹಿತ ಪ್ರಮಾಣಪತ್ರ’ವನ್ನು (ಎನ್‌ಡಿಸಿ) ನೀಡುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !