ಭಾನುವಾರ, ಸೆಪ್ಟೆಂಬರ್ 22, 2019
22 °C
ಮಳೆ

ಮುಂಗಾರು ಪೂರ್ವ ಮಳೆ: ಶೇ 22 ಕಡಿಮೆ

Published:
Updated:

ನವದೆಹಲಿ: ಮುಂಗಾರುಪೂರ್ವ ಮಳೆ ಪ್ರಮಾಣದಲ್ಲಿ ಶೇಕಡ 22ರಷ್ಟು ಕುಸಿತವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಾರ್ಚ್‌ನಿಂದ ಮೇ ತಿಂಗಳ ಅವಧಿಯ ಮುಂಗಾರುಪೂರ್ವ ಮಳೆ ದೇಶದ ಹಲವು ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಅಗತ್ಯವಾಗಿದೆ. ಆದರೆ, ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ ಎಂದು ಅದು ತಿಳಿಸಿದೆ.

ಮಾರ್ಚ್ 1ರಿಂದ ಮೇ 15ರವರೆಗೆ 75.9 ಮಿಲಿ ಮೀಟರ್‌ ಮಳೆಯಾಗಿದೆ. ಆದರೆ ವಾಡಿಕೆ ಮಳೆ 96.8 ಮಿಲಿ ಮೀಟರ್‌ನಷ್ಟಿತ್ತು. ಇದರಿಂದ, ಶೇಕಡ 22ರಷ್ಟು ಕಡಿಮೆ ಮಳೆಯಾಗಿದೆ. ಮಾರ್ಚ್‌ 1ರಿಂದ ಏಪ್ರಿಲ್‌ 24ರವರೆಗೆ ಶೇಕಡ 27ರಷ್ಟು ಕೊರತೆಯಾಗಿದೆ.

 ಈಶಾನ್ಯ ಭಾರತ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಬೆಳೆಗಳಿಗೆ ಮಳೆ ಮುಖ್ಯ. ಜತೆಗೆ ಮಧ್ಯ ಭಾರತದಲ್ಲಿ ಬೆಳೆಯುವ ಕಬ್ಬು, ಹತ್ತಿಯಂತಹ ಬೆಳೆಗಳಿಗೂ ಮಳೆ ಮುಖ್ಯವಾಗುತ್ತದೆ ಎಂದು ಹಮಾಮಾನ ಇಲಾಖೆಯ ಮಾಜಿ ನಿರ್ದೇಶಕ ಲಕ್ಷ್ಮಣ್‌ ಸಿಂಗ್‌ ರಾಠೋಡ್‌ ತಿಳಿಸಿದ್ದಾರೆ.

Post Comments (+)