ಶಿವಸೇನಾ ಹಿಂದುತ್ವ ಬಿಜೆಪಿಗಿಂತ ಭಿನ್ನ: ಆದಿತ್ಯ ಠಾಕ್ರೆ

ಬುಧವಾರ, ಜೂನ್ 26, 2019
24 °C

ಶಿವಸೇನಾ ಹಿಂದುತ್ವ ಬಿಜೆಪಿಗಿಂತ ಭಿನ್ನ: ಆದಿತ್ಯ ಠಾಕ್ರೆ

Published:
Updated:
Prajavani

ನವದೆಹಲಿ: ‘ಹಿಂದುತ್ವವು ಶಿವಸೇನಾದ ಸಿದ್ಧಾಂತಗಳಲ್ಲೊಂದು. ಆದರೆ ಅದು ಬಿಜೆಪಿಯ ಹಿಂದುತ್ವಕ್ಕಿಂತ ಭಿನ್ನವಾದುದು’ ಎಂದು ಶಿವಸೇನಾದ ಯುವ ವಿಭಾಗವಾದ ‘ಯುವ ಸೇನಾ’ದ ಮುಖ್ಯಸ್ಥ ಆದಿತ್ಯ ಠಾಕ್ರೆ ವಾದಿಸಿದ್ದಾರೆ.

ಗುರ್‌ಮೆಹರ್‌ ಕೌರ್‌ ಅವರು ಪ್ರಕಟಿಸಿರುವ, ಯುವ ರಾಜಕಾರಣಿಗಳ ಸಂದರ್ಶನವನ್ನು ಒಳಗೊಂಡ ‘ದಿ ಯಂಗ್‌ ಅಂಡ್‌ ರೆಸ್ಟ್‌ಲೆಸ್‌’ ಕೃತಿಯಲ್ಲಿ  ಆದಿತ್ಯ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೃತಿಯಲ್ಲಿ ಒಮರ್‌ ಅಬ್ದುಲ್ಲಾ, ಸಚಿನ್‌ ಪೈಲಟ್‌, ಆದಿತ್ಯ ಠಾಕ್ರೆ, ಶೆಹ್ಲಾ ರಶೀದ್‌ ಮುಂತಾದ ಯುವ ನಾಯಕರ ಸಂದರ್ಶನಗಳಿವೆ.

‘ಶಿವಸೇನಾದಂಥ ಪಕ್ಷವನ್ನು ಪಲಪಂಥೀಯ ಪಕ್ಷಗಳ ಸಾಲಿನಲ್ಲಿ ಸೇರಿಸುವುದು ಸಹಜ. ನಮ್ಮದು ‘ಮಧ್ಯಮ’ ಹಾದಿ. ಹಿಂದುತ್ವ ನಮ್ಮ ಸಿದ್ಧಾಂತಗಳಲ್ಲೊಂದು. ಆದರೆ ‘ಬಲಮಧ್ಯಮ’ ಹಾದಿಯಲ್ಲಿ ನಾವಿದ್ದೇವೆ. ಯಾಕೆಂದರೆ ನಾವು ಪ್ರಾಯೋಗಿಕವಾಗಿ ಮಾತನಾಡುತ್ತೇವೆ. ನೈಟ್‌ಲೈಫ್‌, ವಿದ್ಯುತ್‌ ಚಾಲಿತ ಬಸ್ಸುಗಳು ಮುಂತಾಗಿ ಸಂಪೂರ್ಣವಾಗಿ ಭಿನ್ನವಾದ ವಿಚಾರಗಳ ಬಗ್ಗೆ ನಾವು ಮಾತನಾಡುತ್ತೇವೆ’ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧಿಸುವ ಹೋರಾಟದಲ್ಲಿ ಆದಿತ್ಯ ಅವರು ಮುಂಚೂಣಿಯಲ್ಲಿದ್ದಾರೆ. ಅಷ್ಟೇ ಅಲ್ಲ ವಾರದ ಏಳು ದಿನವೂ ನೈಟ್‌ಲೈಫ್‌ಗೆ ಅವಕಾಶ ಕಲ್ಪಿಸಬೇಕು ಎನ್ನುವವರ ಪರವಾಗಿದ್ದಾರೆ.

‘ನಾವು ಅನೇಕ ವಿಚಾರಗಳಲ್ಲಿ ಬಿಜೆಪಿಗಿಂತ ಭಿನ್ನವಾಗಿದ್ದೇವೆ’ ಎಂದಿರುವ ಠಾಕ್ರೆ, ಗುಂಪುದಾಳಿ, ಜನರನ್ನು ದೇಶದ್ರೋಹಿಗಳೆಂದು ಕರೆಯುವುದೇ ಮುಂತಾದವುಗಳನ್ನು ಅದಕ್ಕೆ ಉದಾಹರಣೆಯಾಗಿ ಕೊಟ್ಟಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !