ಮಳವಳ್ಳಿ ತಾಲ್ಲೂಕಿನ ಮತಗಟ್ಟೆ ಸಂಖ್ಯೆ 60ರ ಇವಿಎಂನಲ್ಲಿ 70 ಅಣಕು ಮತ ಸೇರ್ಪಡೆ

ಬುಧವಾರ, ಜೂನ್ 19, 2019
27 °C

ಮಳವಳ್ಳಿ ತಾಲ್ಲೂಕಿನ ಮತಗಟ್ಟೆ ಸಂಖ್ಯೆ 60ರ ಇವಿಎಂನಲ್ಲಿ 70 ಅಣಕು ಮತ ಸೇರ್ಪಡೆ

Published:
Updated:

ಮಂಡ್ಯ: ‘ಮಳವಳ್ಳಿ ತಾಲ್ಲೂಕಿನ ಮತಗಟ್ಟೆ ಸಂಖ್ಯೆ 60ರ ವಿದ್ಯುನ್ಮಾನ ಮತಯಂತ್ರದಲ್ಲಿ ತೆರವುಗೊಳಿಸದೇ ಉಳಿದಿರುವ 70 ಅಣಕು ಮತಗಳನ್ನು ಮತ ಎಣಿಕೆಯ ಕೊನೆಯಲ್ಲಿ ತೆರವುಗೊಳಿಸಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಸಿ.ಜಾಫರ್‌ ಸೋಮವಾರ ಹೇಳಿದರು.

‘ಮತದಾನ ಆರಂಭಿಸುವುದಕ್ಕೂ ಮೊದಲು ಮತಗಟ್ಟೆ ಸಿಬ್ಬಂದಿ ಅಣಕು ಮತದಾನ ಮಾಡಿದ್ದಾರೆ. ವಾಸ್ತವ ಮತದಾನ ಆರಂಭವಾಗುವುದಕ್ಕೆ ಮೊದಲು ವಿವಿ ಪ್ಯಾಟ್‌ನಲ್ಲಿ ಸಂಗ್ರಹಗೊಂಡಿದ್ದ ಅಣಕು ಮತದಾನದ ಪತ್ರ ತೆರವುಗೊಳಿಸಿದ್ದಾರೆ. ಆದರೆ ಮತ ತೆರವುಗೊಳಿಸಿಲ್ಲ. ಹೀಗಾಗಿ ಮೇ 23ರಂದು ಎಣಿಕೆ ಪ್ರಕ್ರಿಯೆಯ ಕೊನೆಯಲ್ಲಿ ಅಣಕು ಮತ ತೆರವುಗೊಳಿಸಿ ನಂತರ ಫಲಿತಾಂಶ ಪ್ರಕಟಗೊಳಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸೇವಾ ಮತ ಅಸಿಂಧು: ‘ಸಿಆರ್‌ಪಿಎಫ್‌ ಯೋಧ ಆರ್‌.ನಾಯಕ್‌ ಸೇವಾ ಮತ ಚಲಾವಣೆ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಅವರಿಗೆ ಮತ ಚಲಾವಣೆ ಮಾಡಿರುವುದಾಗಿ ಮತಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಕಾರಣ ಆ ಮತವನ್ನು ಚುನಾವಣಾ ಆಯೋಗ ಅಸಿಂಧುಗೊಳಿಸಿದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !