ವೈದ್ಯಾಧಿಕಾರಿಗೆ ಶಾಸಕ ನಾರಾಯಣಗೌಡ ಬೆದರಿಕೆ; ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೊ

ಸೋಮವಾರ, ಜೂನ್ 17, 2019
28 °C

ವೈದ್ಯಾಧಿಕಾರಿಗೆ ಶಾಸಕ ನಾರಾಯಣಗೌಡ ಬೆದರಿಕೆ; ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೊ

Published:
Updated:
Prajavani

ಮಂಡ್ಯ: ಮದ್ದೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಗುಮಾಸ್ತೆಯೊಬ್ಬರಿಗೆ ವೈದ್ಯಾಧಿಕಾರಿ ಮುರಳಿಕೃಷ್ಣ ಕೆಲಸ ಮಾಡುವಂತೆ ಸೂಚನೆ ನೀಡಿದ್ದಕ್ಕೆ ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಈ ಕುರಿತ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮುರಳಿಕೃಷ್ಣ ಅವರಿಗೆ ಕರೆ ಮಾಡಿರುವ ನಾರಾಯಣಗೌಡ, ‘ಯಾವ ಊರು ನಿಂದು, ನಿನ್ನ ಹಿನ್ನೆಲೆ ಏನು, ಎಲ್ಲಿ ಹುಟ್ಟಿದ್ದೀಯ, ತಂದೆ, ತಾಯಿ ಇಲ್ವಾ, ಒಬ್ಬ ಹೆಣ್ಣು ಮಗಳಿಗೆ ಏನು ಹೇಳಿದ್ದೀಯಾ, ನೀನು ಮೊದಲು ಆಕೆಯ ಕ್ಷಮೆ ಕೇಳಿ ನಂತರ ಕೆಲಸಕ್ಕೆ ಬಾ. ಮಂಡ್ಯದವರು ನಾವು, ಬೇರೆ ಥರ ಆಗುತ್ತೆ, ಯಾವ ಮೂಲೆಯಲ್ಲಿ ಇದ್ದರೂ ಬಿಡುವುದಿಲ್ಲ. 8 ಗಂಟೆಗೆ ಕರ್ತವ್ಯಕ್ಕೆ ಕರೆಯಲು ಏನು ಹಕ್ಕಿದೆ ನಿನಗೆ’ ಎಂದು ಪ್ರಶ್ನಿಸಿದ್ದಾರೆ.

ಶಾಸಕರ ಮಾತುಗಳಿಗೆ ಮುರಳಿಕೃಷ್ಣ, ಕೆಲಸ ಮಾಡುವಂತೆ ಮೆಮೊ ಕೊಟ್ಟಿದ್ದೇನೆ ಸರ್‌, ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಕರೆದಿಲ್ಲ ಎಂದು ಉತ್ತರ ನೀಡುತ್ತಾರೆ. ಅದಕ್ಕೆ ಮತ್ತಷ್ಟು ಕೆರಳಿದ ಶಾಸಕರು, ನಿನ್ನನ್ನು ಮೆಂಟಲ್‌ ಆಸ್ಪತ್ರೆಗೆ ಕರೆದೊಯ್ದು ಸರಿ ಮಾಡಿಸುತ್ತೇವೆ. ಹೇಗೆ ಸರಿ ಮಾಡಿಸಬೇಕು ಎಂಬುದು ನಮಗೆ ಗೊತ್ತಿದೆ ಎಂದು ಆಕ್ರೋಶಗೊಂಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !