ಜಾಗತೀಕರಣದಿಂದ ಬಡತನ ಇಳಿಕೆ

ಬುಧವಾರ, ಜೂನ್ 19, 2019
25 °C
ಸಂಪತ್ತಿನ ಅಸಮಾನತೆಗೂ ಕಾರಣ: ಐಎಂಎಫ್‌ ಮುಖ್ಯ ಆರ್ಥಿಕ ಸಲಹೆಗಾರ್ತಿ ಗೀತಾ ಗೋಪಿನಾಥ್‌ ಪ್ರತಿಪಾದನೆ

ಜಾಗತೀಕರಣದಿಂದ ಬಡತನ ಇಳಿಕೆ

Published:
Updated:
Prajavani

ಮೈಸೂರು: ‘ಜಾಗತೀಕರಣದಿಂದಾಗಿ ವಿಶ್ವದೆಲ್ಲೆಡೆ ಬಡತನ ಪ್ರಮಾಣ ಇಳಿಕೆ ಆಗಿದೆ. 1981ರಲ್ಲಿ ಶೇ 42ರಷ್ಟಿದ್ದ ಬಡತನ ಮಟ್ಟ 2015ರ ವೇಳೆಗೆ ಶೇ 10ಕ್ಕೆ ಬಂದು ನಿಂತಿದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯ ಆರ್ಥಿಕ ಸಲಹೆಗಾರ್ತಿ ಗೀತಾ ಗೋಪಿನಾಥ್‌ ಪ್ರತಿಪಾದಿಸಿದರು.

ಜೆಎಸ್‌ಎಸ್‌ ಮಹಾವಿದ್ಯಾಪೀಠ ಸೋಮವಾರ ಆಯೋಜಿಸಿದ್ದ ಸುವರ್ಣಮಹೋತ್ಸವ ದತ್ತಿ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಅವರು ‘ಜಾಗತೀಕರಣ: ಸವಾಲುಗಳು ಮತ್ತು ಸಹಕಾರದ ಅಗತ್ಯ’ ಕುರಿತು ಉಪನ್ಯಾಸ ನೀಡಿದರು.

‘ಪ್ರಮುಖ ವಸ್ತುಗಳ ಬೆಲೆ ತಗ್ಗಿದೆ. ಪಗಾರದಲ್ಲಿ ಹೆಚ್ಚಳವಾಗಿದೆ. ಉದ್ಯೋಗಾವಕಾಶಗಳು ಹೆಚ್ಚಿವೆ. ಕೆಲವರಿಗೆ ಲಾಭವಾಗಿದ್ದರೆ, ಇನ್ನು ಕೆಲವರಿಗೆ ಅನಾನುಕೂಲವಾಗಿದೆ. ಆಯಾ ದೇಶಗಳ ಸರ್ಕಾರಿ ನೀತಿಗಳ ಮೇಲೆ ಲಾಭ, ನಷ್ಟ ಅವಲಂಬಿಸಿದೆ’ ಎಂದರು.

‘ಸೇವಾ ಕ್ಷೇತ್ರದಲ್ಲಿ ಭಾರತವು ಮುಂಚೂಣಿಯಲ್ಲಿ ಇದ್ದರೂ ರಫ್ತು ಕ್ಷೇತ್ರದಲ್ಲಿ ನಿರೀಕ್ಷಿತ ಗುರಿ ತಲುಪಿಲ್ಲ. 1997ರಲ್ಲಿ ಶೇ 0.7 ಇದ್ದ ರಫ್ತು ಪ್ರಮಾಣ ಈಗ ಶೇ 2ಕ್ಕೇರಿದೆ. ಬಾಂಗ್ಲಾದೇಶ, ವಿಯೆಟ್ನಾಂ ದೇಶಗಳಿಗಿಂತ ಕಡಿಮೆ ಇದೆ. ಇದೇ ಅವಧಿಯಲ್ಲಿ ಚೀನಾದ ರಫ್ತು ಪ್ರಮಾಣ ಶೇ 2ರಿಂದ 11ಕ್ಕೇರಿದೆ’ ಎಂದು ಮಾಹಿತಿ ನೀಡಿದರು.

‘ಜಾಗತೀಕರಣದಿಂದ ಆದಾಯ ತಾರತಮ್ಯ ಹೆಚ್ಚುತ್ತಿದೆ. ಸಂಪತ್ತಿನ ಅಸಮಾನತೆಗೂ ಕಾರಣವಾಗಿದೆ. ಭಾರತದಲ್ಲಿ 1980ರಲ್ಲಿ ಶೇ 6.7ರಷ್ಟು ದೇಶದ ಆದಾಯ ಶೇ 1ರಷ್ಟು ಶ್ರೀಮಂತರ ಬಳಿ ಇತ್ತು. ಆದರೆ, ಈಗ ಇದೇ 1ರಷ್ಟು ಜನರು ದೇಶದ ಆದಾಯದ ಶೇ 21ರಷ್ಟು ಪಾಲು ಹೊಂದಿದ್ದಾರೆ. ಆದಾಯ ವಿತರಣೆಯಲ್ಲಿ ಉಂಟಾಗುತ್ತಿರುವ ಅಸಮಾನತೆ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ’ ಎಂದು ವಿವರಿಸಿದರು.

‘ಜಾಗತಿಕ ತಾಪಮಾನದಿಂದ ಅಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಇದರಿಂದ ಭಾರತ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಕೃಷಿ ಚಟುವಟಿಕೆಗಳಿಗೆ ಮಾರಕವಾಗಿದ್ದು, ಉತ್ಪಾದನೆ ಪ್ರಮಾಣ ಕಡಿಮೆ ಆಗುತ್ತಿದೆ. ಜಿಡಿಪಿ ದರದ ಮೇಲೆ ಹೊಡೆತ ಬೀಳುತ್ತಿದೆ. ಜಾಗತಿಕ ತಾಪಮಾನ ತಗ್ಗಿಸಲು ಒಂದು ದೇಶದಿಂದ ಸಾಧ್ಯವಿಲ್ಲ. ಅದಕ್ಕೆ ಎಲ್ಲಾ ದೇಶಗಳು ಒಟ್ಟುಗೂಡಿ ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !