ಶುಕ್ರವಾರ, ಫೆಬ್ರವರಿ 26, 2021
32 °C

ಬಸವಣ್ಣನ ಐಕ್ಯಮಂಟಪಕ್ಕೆ ಪ್ರವೇಶ ನಿಷೇಧ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ದುರಸ್ತಿ ಕಾಮಗಾರಿ ಆರಂಭಿಸುವ ಉದ್ದೇಶದಿಂದ ಇಲ್ಲಿನ ಬಸವಣ್ಣನ ಐಕ್ಯಮಂಟಪದ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶವನ್ನು ಬುಧವಾರದಿಂದ (ಮೇ 22) ನಿಷೇಧಿಸಲಾಗಿದೆ.

‘ಐಕ್ಯಮಂಟಪದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅದನ್ನು ಸರಿ ಮಾಡುವವರೆಗೂ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ’ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತೆ ರಾಜಶ್ರೀ ಅಗಸರ ತಿಳಿಸಿದ್ದಾರೆ.

ಮೆಶ್ ಅಳವಡಿಕೆಗೆ ಪರಿಶೀಲನೆ: ಸಮೀಪದಲ್ಲಿ ಬಸವ ಇಂಟರ್‌ ನ್ಯಾಷನಲ್ ಸೆಂಟರ್‌ನ ಕಾಮಗಾರಿ ಕೈಗೊಂಡಿರುವ ಹೈದರಾಬಾದ್‌ನ ಕೆಎಂವಿ ಕನ್‌ಸ್ಟ್ರಕ್ಷನ್‌ನ ಎಂಜಿನಿಯರ್‌ಗಳ ತಂಡ ಮಂಗಳವಾರ ಐಕ್ಯಮಂಟಪಕ್ಕೆ ಭೇಟಿ ನೀಡಿ ಮೆಶ್ ಅಳವಡಿಸಲು ಮಂಡಳಿಯ ಅಧಿಕಾರಿಗಳಿಗೆ ಸಲಹೆ ನೀಡಿತು.

‘ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್‌ಗಳ ತಂಡ ಬುಧವಾರ ಬೆಳಿಗ್ಗೆ ಐಕ್ಯಮಂಟಪಕ್ಕೆ ಬರಲಿದ್ದು, ಅವರ ಮಾರ್ಗದರ್ಶನದಲ್ಲಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಜಯಶ್ರೀ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು