ಬಿಸಿಸಿಐ ಚುನಾವಣೆಗೆ ಸಿಒಎ ಹಸಿರು ನಿಶಾನೆ

ಗುರುವಾರ , ಜೂನ್ 20, 2019
24 °C

ಬಿಸಿಸಿಐ ಚುನಾವಣೆಗೆ ಸಿಒಎ ಹಸಿರು ನಿಶಾನೆ

Published:
Updated:
Prajavani

ನವದೆಹಲಿ: ಕಳೆದ ಕೆಲವು ವರ್ಷಗಳಿಂದ ಭಾರತದ ಕ್ರಿಕೆಟ್ ಕ್ಷೇತ್ರವು ಕಾತರದಿಂದ ಎದುರು ನೋಡುತ್ತಿದ್ದ ಸಮಯವು ಈಗ ಬಂದಿದೆ.

ಶ್ರೀಮಂತ ಕ್ರೀಡಾ ಸಂಸ್ಥೆಗಳಲ್ಲಿ ಒಂದಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ನೂತನ ಆಡಳಿತ ಸಮಿತಿಯನ್ನು ನೇಮಕ ಮಾಡಲು ಅಕ್ಟೋಬರ್‌ 22ರಂದು ಚುನಾವಣೆ ನಡೆಯಲಿದೆ.

ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳ ಜಾರಿಗೆ ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಮಂಗಳವಾರ ಈ ವಿಷಯ ಪ್ರಕಟಿಸಿದೆ.

ಬಿಸಿಸಿಐ ಆಡಳಿತದಲ್ಲಿ ಸುಧಾರಣೆಗಳನ್ನು ತರಲು ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಸಮಿತಿಯನ್ನು ಮೂರು ವರ್ಷಗಳ ಹಿಂದೆ ನೇಮಕ ಮಾಡಿತ್ತು. ಎರಡು ವರ್ಷಗಳ ಹಿಂದೆ ಸಮಿತಿಯು ಶಿಫಾರಸುಗಳನ್ನು ಸಲ್ಲಿಸಿತ್ತು. 2017ರ ಜನವರಿಯಲ್ಲಿ  ಅಧಿಕಾರದಲ್ಲಿದ್ದ ಆಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ  ಅವರನ್ನು ವಜಾಗೊಳಿಸಲಾಗಿತ್ತು.  ಹಂಗಾಮಿ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಶಿಫಾರಸುಗಳ ಜಾರಿಗೆ ವಿನೋದ್‌ ರಾಯ್ ನೇತೃತ್ವದ ಸಿಒಎ ನೇಮಕವಾಗಿತ್ತು.

ಹೋದ ವರ್ಷ ಪರಿಷ್ಕೃತ ಶಿಫಾರಸುಗಳ ಜಾರಿಗೆ ಕೋರ್ಟ್‌ ತೀರ್ಪು ನೀಡಿತ್ತು. ರಾಜ್ಯ ಸಂಸ್ಥೆಗಳೊಂದಿಗೆ ಚರ್ಚಿಸಿ ಒಮ್ಮತಕ್ಕೆ ಬರಲು ಅಮಿಕ್ಯೂಸ್ ಕ್ಯೂರಿ ಪಿ.ಎಸ್. ನರಸಿಂಹ ಅವರಿಗೆ ಹೊಣೆ ನೀಡಲಾಗಿತ್ತು.

ಈಚೆಗೆ ಅವರು ತಮ್ಮ ಅಂತಿಮ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ಪದಾಧಿಕಾರಿಗಳ ನೇಮಕಕ್ಕೆ ಚುನಾವಣೆ ನಡೆಸಲು ಸಲಹೆ ನೀಡಿದ್ದರು.

ಇದೀಗ ಕೋರ್ಟ್‌ ಸೂಚನೆಯಂತೆ ಸಿಒಎ ಮುಖ್ಯಸ್ಥ ವಿನೋದ್ ರಾಯ್, ಸದಸ್ಯರಾದ ರವಿ ಥೋಡ್ಗೆ ಮತ್ತು ಡಯಾನ ಎಡುಲ್ಜಿ ಅವರು ಚುನಾವಣೆಗೆ ಹಸಿರು ನಿಶಾನೆ ತೋರಿಸಿದ್ದಾರೆ.

‘ರಾತ್ರಿ ಕಾವಲುಗಾರನಂತೆ ಕಾರ್ಯನಿರ್ವಹಿಸುವಂತೆ ನಾನು ನೇಮಕವಾದಾಗ ಕೋರ್ಟ್‌ ಹೇಳಿತ್ತು. ನಮ್ಮ ಕೆಲಸದ ಬಗ್ಗೆ ನಮಗೆ ಸ್ಪಷ್ಟತೆ ಇತ್ತು. ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳು ಶಿಫಾರಸುಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದು ನಮ್ಮ ಕಾರ್ಯವಾಗಿತ್ತು. ಅದರಲ್ಲಿ ಬಂದ ಅಡೆತಡೆಗಳನ್ನು ನಿವಾರಿಸಿ ಒಂದು ಹಂತಕ್ಕೆ ತಂದಿರುವುದು ಸಂತಸ ತಂದಿದೆ’ ಎಂದು ವಿನೋದ್ ರಾಯ್ ಹೇಳಿದರು.

‘ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುನಾಯಿತ ಪದಾಧಿಕಾರಿಗಳು ಕ್ರಿಕೆಟ್ ಆಡಳಿತದ ಹೊಣೆ ನಿರ್ವಹಿಸಬೇಕು ಎಂಬುದು ನಮ್ಮ ಆಶಯವಾಗಿದೆ‘ ಎಂದು ಹೇಳಿದರು.

‘ಅಮಿಕಸ್ ಕ್ಯೂರಿ ನರಸಿಂಹ ಅವರು ರಾಜ್ಯ ಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸಲು ಮತ್ತು ಅವುಗಳ ಕುರಿತು ಚರ್ಚಿಸಲು 151 ಗಂಟೆಗಳ ನ್ನು ವಿನಿಯೋಗಿಸಿದ್ದಾರೆ. ನಮ್ಮ ಸಮಿತಿಯು ಹತ್ತಾರು ಬಾರಿ ಕೋರ್ಟ್‌ಗೆ ಯಥಾಸ್ಥಿತಿ ವರದಿಗಳನ್ನು ಸಲ್ಲಿಸಿದ್ದೇವೆ’ ಎಂದರು.

 

 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !