ಫಲಿತಾಂಶಕ್ಕೂ ಮೊದಲೇ ವಿವಾಹ ಆಹ್ವಾನ ಪತ್ರಿಕೆಯಲ್ಲಿ ನಿಖಿಲ್‌ ಸಂಸದ!

ಮಂಗಳವಾರ, ಜೂನ್ 18, 2019
29 °C

ಫಲಿತಾಂಶಕ್ಕೂ ಮೊದಲೇ ವಿವಾಹ ಆಹ್ವಾನ ಪತ್ರಿಕೆಯಲ್ಲಿ ನಿಖಿಲ್‌ ಸಂಸದ!

Published:
Updated:
Prajavani

ಮಂಡ್ಯ: ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬೀಳುವುದಕ್ಕೂ ಮೊದಲೇ ಜೆಡಿಎಸ್‌–ಕಾಂಗ್ರೆಸ್‌ ಅಭ್ಯರ್ಥಿ ಕೆ.ನಿಖಿಲ್‌ ಸಂಸದ ಪಟ್ಟ ಅಲಂಕರಿಸಿದ್ದಾರೆ. ವಿವಾಹವೊಂದರ ಆಹ್ವಾನ ಪತ್ರಿಕೆಯಲ್ಲಿ ‘ವಿಶೇಷ ಆಹ್ವಾನಿತರು ಕೆ.ನಿಖಿಲ್‌ ಕುಮಾರಸ್ವಾಮಿ, ಸಂಸದರು, ಮಂಡ್ಯ ಜಿಲ್ಲೆ’ ಎಂದು ಭಾವಚಿತ್ರದೊಂದಿಗೆ ಮುದ್ರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಶ್ರೀರಂಗಪಟ್ಟಣ ತಾಲ್ಲೂಕು ಮೇಳಾಪುರ ಗ್ರಾಮದ ಎಂ.ಎನ್‌.ಅಶೋಕ್‌ಕುಮಾರ್‌ ಅವರ ವಿವಾಹ ಅದೇ ಗ್ರಾಮದ ಬಿ.ಅಭಿಲಾಷಾ ಅವರೊಂದಿಗೆ ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್‌ ಭವನದಲ್ಲಿ ಜೂನ್‌ 8, 9ರಂದು ನಡೆಯಲಿದೆ. ಆಹ್ವಾನ ಪತ್ರಿಕೆ ಬಲಪುಟದಲ್ಲಿ ವಧು–ವರರ ವಿವರ ಮುದ್ರಿಸಲಾಗಿದ್ದು ಎಡ ಭಾಗದ ಒಂದು ಪುಟವಿಡೀ ನಿಖಿಲ್‌ ಭಾವಚಿತ್ರ ಮುದ್ರಿಸಲಾಗಿದೆ. ‘ಯುವ ಸಾರಥಿ’ ಎಂಬ ಬಿರುದಿನೊಂದಿಗೆ ಸಂಸದ ಪಟ್ಟ ನೀಡಲಾಗಿದೆ. ಚುನಾವಣಾ ಫಲಿತಾಂಶದ ಮುನ್ನಾದಿನ ಈ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕುತೂಹಲ ಮೂಡಿಸಿದೆ.

* ಇದನ್ನೂ ಓದಿ: ಅಸಹನೆಯ ನುಡಿಗೆ ಬೆಲೆ ತೆತ್ತ ಕುಮಾರಸ್ವಾಮಿ

‘ನಾನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅಭಿಮಾನಿ. ಚುನಾವಣೆಯಲ್ಲಿ ನಿಖಿಲ್‌ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಈಗಾಗಲೇ ಅವರು ಮಂಡ್ಯ ಜಿಲ್ಲೆಯ ಸಂಸದರಾಗಿದ್ದಾರೆ. ಹೀಗಾಗಿ ವಿವಾಹ ಆಹ್ವಾನ ಪತ್ರಿಕೆಯಲ್ಲಿ ಅವರ ಭಾವಚಿತ್ರ ಹಾಕಿಸಿದ್ದೇನೆ’ ಎಂದು ವರ ಅಶೋಕ್‌ಕುಮಾರ್‌ ತಿಳಿಸಿದ್ದಾರೆ.

ಖಾಸಗಿಯಾಗಿ ಆಹ್ವಾನ ಪತ್ರಿಕೆಯಲ್ಲಿ ಸಂಸದ ಎಂದು ಮುದ್ರಿಸಿದರೆ ಅದು ನೀತಿ ಸಂಹಿತೆಯ ಉಲ್ಲಂಘನೆ ಆಗುವುದಿಲ್ಲ ಎಂದು ಸಹಾಯಕ ಚುನಾವಣಾಧಿಕಾರಿಯೊಬ್ಬರು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 19

  Happy
 • 4

  Amused
 • 7

  Sad
 • 12

  Frustrated
 • 43

  Angry

Comments:

0 comments

Write the first review for this !