ಸಂಸದರಾದ ನಿಖಿಲ್‌, ಫ್ಲೆಕ್ಸ್‌ನಲ್ಲಿ ಸುಮಲತಾ ಗೆಲುವು!

ಬುಧವಾರ, ಜೂನ್ 19, 2019
23 °C

ಸಂಸದರಾದ ನಿಖಿಲ್‌, ಫ್ಲೆಕ್ಸ್‌ನಲ್ಲಿ ಸುಮಲತಾ ಗೆಲುವು!

Published:
Updated:

ಮಂಡ್ಯ: ಚುನಾವಣೆ ಫಲಿತಾಂಶಕ್ಕೆ ಕೆಲವೇ ಗಂಟೆ ಇರುವ ಮೊದಲೇ ಕೆ.ನಿಖಿಲ್‌ ಹಾಗೂ ಎ.ಸುಮಲತಾ ಬೆಂಬಲಿಗರು ವಿಜಯೋತ್ಸವದಲ್ಲಿ ತೊಡಗಿದ್ದಾರೆ. ಯುವಕನೊಬ್ಬ ತನ್ನ ವಿವಾಹದ ಆಹ್ವಾನ ಪತ್ರಿಕೆಯಲ್ಲಿ ನಿಖಿಲ್‌ಗೆ ಸಂಸದ ಪಟ್ಟ ಕೊಟ್ಟಿದ್ದರೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸುಮಲತಾ ಗೆಲುವು ಸಾಧಿಸಿರುವುದಾಗಿ ಫ್ಲೆಕ್ಸ್‌ ಮುದ್ರಿಸಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕು ಮೇಳಾಪುರ ಗ್ರಾಮದ ಎಂ.ಎನ್‌.ಅಶೋಕ್‌ಕುಮಾರ್‌ ಅವರ ವಿವಾಹ ಅದೇ ಗ್ರಾಮದ ಬಿ.ಅಭಿಲಾಷಾ ಅವರೊಂದಿಗೆ ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್‌ ಭವನದಲ್ಲಿ ಜೂನ್‌ 8, 9ರಂದು ನಡೆಯಲಿದೆ. ಆಹ್ವಾನ ಪತ್ರಿಕೆಯಲ್ಲಿ ‘ವಿಶೇಷ ಆಹ್ವಾನಿತರು ಕೆ.ನಿಖಿಲ್‌ ಕುಮಾರಸ್ವಾಮಿ, ಸಂಸದರು, ಮಂಡ್ಯ ಜಿಲ್ಲೆ’ ಎಂದು ಭಾವಚಿತ್ರದೊಂದಿಗೆ ಮುದ್ರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆಹ್ವಾನ ಪತ್ರಿಕೆ ಬಲಪುಟದಲ್ಲಿ ವಧು–ವರರ ವಿವರ ಮುದ್ರಿಸಲಾಗಿದ್ದು ಎಡ ಭಾಗದ ಒಂದು ಪುಟವಿಡೀ ನಿಖಿಲ್‌ ಭಾವಚಿತ್ರ ಮುದ್ರಿಸಲಾಗಿದೆ. ‘ಯುವ ಸಾರಥಿ’ ಎಂಬ ಬಿರುದಿನೊಂದಿಗೆ ಸಂಸದ ಪಟ್ಟ ನೀಡಲಾಗಿದೆ.

‘ನಾನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅಭಿಮಾನಿ. ಚುನಾವಣೆಯಲ್ಲಿ ನಿಖಿಲ್‌ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಈಗಾಗಲೇ ಅವರು ಮಂಡ್ಯ ಜಿಲ್ಲೆಯ ಸಂಸದರಾಗಿದ್ದಾರೆ. ಹೀಗಾಗಿ ವಿವಾಹ ಆಹ್ವಾನ ಪತ್ರಿಕೆಯಲ್ಲಿ ಅವರ ಭಾವಚಿತ್ರ ಹಾಕಿಸಿದ್ದೇನೆ’ ಎಂದು ವರ ಅಶೋಕ್‌ಕುಮಾರ್‌ ತಿಳಿಸಿದ್ದಾರೆ.

ಸುಮಲತಾಗೆ ಗೆಲುವು‌

ಮತ್ತೊಂದೆಡೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಯುವ ಕಾಂಗ್ರೆಸ್‌ ಸದಸ್ಯರು ಹಾಗೂ ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಅಭಿಮಾನಿಗಳು, ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿರುವುದಾಗಿ ಫೆಕ್ಸ್‌ ಮುದ್ರಿಸಿದ್ದಾರೆ. ಅದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶೀಲರಾದ ಎ.ಸುಮಲತಾ ಅಂಬರೀಷ್‌ ಅವರಿಗೆ ಹೃದಯ ತುಂಬಿದ ಅಭಿನಂದನೆಗಳು’ ಎಂದು ಫ್ಲೆಕ್ಸ್‌ನಲ್ಲಿ ಮುದ್ರಿಸಿದ್ದಾರೆ. ಅಭಿಮಾನಿಗಳ ಹೆಸರು ಹಾಗೂ ಭಾವಚಿತ್ರಗಳು ಫ್ಲೆಕ್ಸ್‌ನಲ್ಲಿವೆ. ಚುನಾವಣಾ ಫಲಿತಾಂಶದ ಮುನ್ನಾದಿನ ಬೆಂಬಲಿಗರ ನಡೆ ಕುತೂಹಲವನ್ನು ಮತ್ತಷ್ಟು ಕೆರಳಿಸಿದೆ.

‘ಖಾಸಗಿಯಾಗಿ ಆಹ್ವಾನ ಪತ್ರಿಕೆಯಲ್ಲಿ ಸಂಸದ ಎಂದು ಮುದ್ರಿಸಿದರೆ ಅದು ಅವರ ವೈಯಕ್ತಿಕ. ಆದರೆ ಫಲಿತಾಂಶಕ್ಕೂ ಮೊದಲೇ ಜಯಗಳಿಸಿರುವುದಾಗಿ ಫ್ಲೆಕ್ಸ್‌ ಹಾಕಿದರೆ ಘರ್ಷಣೆ ಉಂಟಾಗುವು ಸಾಧ್ಯತೆ ಇದೆ. ಈ ವಿಷಯವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಮನಕ್ಕೆ ತರುತ್ತೇನೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಸಿ.ಜಾಫರ್‌ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !