ಮ್ಯಾಚ್‌ ವಿನ್ನರ್‌ಗಳ ತಂಡ ಭಾರತ: ಮಿಥಾಲಿ

ಗುರುವಾರ , ಜೂನ್ 27, 2019
26 °C

ಮ್ಯಾಚ್‌ ವಿನ್ನರ್‌ಗಳ ತಂಡ ಭಾರತ: ಮಿಥಾಲಿ

Published:
Updated:
Prajavani

ನವದೆಹಲಿ: ಭಾರತ ತಂಡದಲ್ಲಿ ಈಗ ಮಹೇಂದ್ರಸಿಂಗ್ ಧೋನಿ ಸೇರಿದಂತೆ ಬಹಳಷ್ಟು ಮ್ಯಾಚ್‌ ವಿನ್ನಿಂಗ್ ಆಟಗಾರರು ಇದ್ದಾರೆ. ಆದ್ದರಿಂದ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ  ಆಟಗಾರ್ತಿ ಮಿಥಾಲಿ ರಾಜ್ ಹೇಳಿದ್ದಾರೆ.

ಅವರು ಮಾತನಾಡಿರುವ ವಿಡಿಯೊ  ತುಣುಕನ್ನು ಟ್ವಿಟರ್‌ನಲ್ಲಿ  ಹಾಕಿದ್ದಾರೆ.

‘ನಾಯಕ ವಿರಾಟ್ ಕೊಹ್ಲಿ  ಸ್ವತಃ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರೊಂದಿಗೆ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರೂ ಎದುರಾಳಿ ಬೌಲರ್‌ಗಳಿಗೆ ಬೆವರಿಳಿಸುವ ಸಮರ್ಥರು. ಆದರೆ, ವೇಗದ ಬೌಲರ್‌ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್‌ಗಳು ಕೂಡ ಪಂದ್ಯ ಗೆಲ್ಲಿಸಿಕೊಡುವ ಸಮರ್ಥರು’ ಎಂದು ಮಿಥಾಲಿ ಹೇಳಿದ್ದಾರೆ.

‘ಮಹೇಂದ್ರಸಿಂಗ್ ಧೋನಿ ಅವರ ಅನುಭವವು ಅಮೂಲ್ಯವಾದದ್ದು. ಅವರು ಮಹತ್ವದ ಪಾತ್ರ ವಹಿಸುವರು. ತಂಡದಲ್ಲಿ ಬಹಳಷ್ಟು ವೈವಿಧ್ಯತೆ ಇದೆ. ಆದ್ದರಿಂದ ಎಲ್ಲರಿಗೂ ಪಂದ್ಯ ಜಯಿಸುವ ಶಕ್ತಿ ಇರುವುದರಿಂದ ಒಬ್ಬ ಆಟಗಾರನನ್ನು ಮಾತ್ರ ಫೆವರಿಟ್ ಎಂದು ಆಯ್ಕೆ ಮಾಡುವುದು ಕಷ್ಟ’ ಎಂದಿದ್ದಾರೆ.

‘ಐಪಿಎಲ್‌ನಲ್ಲಿ ಆಡಿದ್ದ ಆಟಗಾರರು ಉತ್ತಮ ಲಯದಲ್ಲಿದ್ದಾರೆ. ಎಲ್ಲ ತಂಡಗಳ ಆಟಗಾರರು ಇಲ್ಲಿ ಆಡಿ ಹೋಗಿದ್ದಾರೆ. ಈಗ ವಿಶ್ವಕಪ್‌ನಲ್ಲಿ ಮಿಂಚುವತ್ತ ಚಿತ್ತ ನೆಟ್ಟಿದ್ದಾರೆ’ ಎಂದರು.

‘ನಿಸ್ಸಂಶಯವಾಗಿ ಭಾರತವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.  ಹಿಂದಿನ ಕೆಲವು ವರ್ಷಗಳಲ್ಲಿ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ತಂಡದ ಆಟಗಾರರು ಉತ್ತಮ ಸಾಧನೆ ಮಾಡುತ್ತಿದ್ದಾರೆ’ ಎಂದು ಮಿಥಾಲಿ ಹೇಳಿದರು.

‘ಟೂರ್ನಿಯ ಆತಿಥ್ಯ ವಹಿಸುತ್ತಿರುವ ಇಂಗ್ಲೆಂಡ್ ತಂಡ ಕೂಡ ಬಲಿಷ್ಠವಾಗಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೂ ಹೌದು. ಇತ್ತೀಚಿನ ದಿನಗಳಲ್ಲಿ ಅವರು 10–15 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಜೊತೆಗೆ ತವರಿನಲ್ಲಿಯೇ ಆಡುತ್ತಿರುವುದರ ಲಾಭವೂ ತಂಡಕ್ಕೆ ಸಿಗಲಿದೆ’ ಎಂದು ಅಭಿಪ್ರಾಯಪಟ್ಟರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !