ಕೊನೆಗೂ ‘ಕೈ’ ಬಿಟ್ಟ ಮತದಾರ, ಬದಲಾವಣೆ ಬಯಸಿ ಬಿಜೆಪಿಗೆ ಅಧಿಕಾರ ನೀಡಿದ

ಸೋಮವಾರ, ಜೂನ್ 17, 2019
28 °C

ಕೊನೆಗೂ ‘ಕೈ’ ಬಿಟ್ಟ ಮತದಾರ, ಬದಲಾವಣೆ ಬಯಸಿ ಬಿಜೆಪಿಗೆ ಅಧಿಕಾರ ನೀಡಿದ

Published:
Updated:
Prajavani

ಚಿಕ್ಕಬಳ್ಳಾಪುರ: ಹಿಂದೆಂದೂ ಬಿಜೆಪಿಯನ್ನು ಹತ್ತಿರ ಬಿಟ್ಟುಕೊಳ್ಳದ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮತದಾರ, ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವಿನ ಆಸೆ ಹುಟ್ಟಿಸಿದ್ದ. ಈ ಬಾರಿ ‘ಕೈ’ ಬಿಟ್ಟು ಬಿಜೆಪಿಗೆ ‘ಅಸ್ತು’ ಎನ್ನುವ ಮೂಲಕ ಬದಲಾವಣೆ ಬಯಸುತ್ತಿದ್ದ ತನ್ನ ಮತದಾಳದ ತೆರೆದಿಟ್ಟು ಸತತ ಗೆಲುವಿನಿಂದ ಬೀಗುತ್ತಿದ್ದ ಕಾಂಗ್ರೆಸ್‌ಗೆ ಮರ್ಮಾಘಾತ ಉಂಟು ಮಾಡಿದ್ದಾನೆ.

ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ, ಇನ್ನೊಂದೆಡೆ ಕಳೆದ ವಿಧಾನಸಭೆಯ ಸೋಲಿನ ಅನುಕಂಪ ಮುಂದು ಮಾಡಿ ಮತಯಾಚಿಸಿದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರಿಗೆ 7,45,912 ತಮ್ಮ ಮತ ನೀಡುವ ಮೂಲಕ ಗೆಲುವಿನ ದಡ ಸೇರಿಸಿದ್ದಾರೆ.

ಕಳೆದ ಎರಡು ಅವಧಿಯಲ್ಲಿ ಇಲ್ಲಿಂದ ಆಯ್ಕೆಯಾಗಿ ಪುನಃ ಆಯ್ಕೆ ಬಯಸಿ ಕಣಕ್ಕಿಳಿದಿದ್ದ ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ಅವರಿಗೆ ಈ ಬಾರಿ 5,63,802 ಮತದಾರ ಮನಗೆಲ್ಲಲ್ಲು ಮಾತ್ರ ಸಾಧ್ಯವಾಗಿದೆ. ಹೀಗಾಗಿ ಅವರು 1,82,110 ಮತಗಳ ಅಂತರದಿಂದ ಪರಾಭವಗೊಂಡರು.

ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಮೈತ್ರಿ ಪಕ್ಷಗಳ ಏಳು ಶಾಸಕರ ಬಲ ಹೊಂದಿದ್ದ ಮೊಯಿಲಿ ಅವರನ್ನು ಒಂದೇ ಒಂದು ಕ್ಷೇತ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪ್ರತಿನಿಧಿಸಿದ ಬಚ್ಚೇಗೌಡರು ದೊಡ್ಡ ಮಟ್ಟದ ಅಂತರದಿಂದ ಸೋಲಿಸಿದ್ದು, ಸಮ್ಮಿಶ್ರ ಸರ್ಕಾರಕ್ಕೆ ಭಾರಿ ಮುಖಭಂಗ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇನ್ನು, ನನಗೆ ಇಲ್ಲಿನ ನೆಲ, ಜಲದ ಸಮಸ್ಯೆಗಳ ಕುರಿತಂತೆ ಅರಿವಿದೆ. ಹೀಗಾಗಿ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನನ್ನದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಬಹುಜನ ಸಮಾಜ ಪಕ್ಷದಿಂದ (ಬಿಎಎಸ್ಪಿ) ಕಣಕ್ಕಿಳಿದಿದ್ದ ವಕೀಲ ಸಿ.ಎಎಸ್.ದ್ವಾರಕಾನಾಥ್‌ ಅವರು 23,446 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕಳೆದ ಬಾರಿ ಬಿಎಸ್ಪಿ ಅಭ್ಯರ್ಥಿ ಗಳಿಸಿದ (6,279) ಮತಗಳಿಗೆ ಹೋಲಿಸಿದರೆ ಈ ಬಾರಿ ಮತಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

ಇದೇ ಮೊದಲ ಬಾರಿಗೆ ಸಿಪಿಎಂ ಈ ಕ್ಷೇತ್ರದಲ್ಲಿ ಕಾರ್ಮಿಕ ನಾಯಕಿ, ಹೋರಾಟಗಾರ್ತಿ, ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಅವರನ್ನು ಕಣಕ್ಕಿಳಿಸುವ ಮೂಲಕ ತಮ್ಮಲ್ಲಿ ಲಿಂಗಬೇಧವಿಲ್ಲ ಎಂಬ ಸಂದೇಶ ಸಾರಿತ್ತು. ಸದಾ ಹೋರಾಟಗಳಲ್ಲಿ ಮುಳುಗಿರುವ ವರಲಕ್ಷ್ಮಿ ಅವರಿಗೆ ಮತದಾರರು ತಮ್ಮನ್ನು ಚಳವಳಿಗಳಿಂದಾಗಿ ಗುರುತಿಸುತ್ತಿದ್ದಾರೆ ಎಂಬ ಆಶಾಭಾವನೆ ಮನೆ ಮಾಡಿತ್ತು.

ಆದರೆ ಈ ಚುನಾವಣೆಯಲ್ಲಿ 18,648 ಮತದಾರರು ಮಾತ್ರ ವರಲಕ್ಷ್ಮಿ ಅವರನ್ನು ಬೆಂಬಲಿಸಿದ್ದಾರೆ. ವಿಶೇಷವೆಂದರೆ ಕಳೆದ ಬಾರಿಯ ಚುನಾವಣೆಯಲ್ಲಿ ಸಿಪಿಎಂನಿಂದ ಜಿ.ವಿ.ಶ್ರೀರಾಮರೆಡ್ಡಿ ಅವರು ಕಣಕ್ಕಿಳಿದಾಗ ಅವರಿಗೆ 26,071 ಮತಗಳು ದೊರೆತಿದ್ದವು. ಆದರೆ ಈ ಬಾರಿ 7,423 ಮತಗಳು ನಷ್ಟವಾಗಿವೆ. ಇದು ಸಿಪಿಎಂ ಪಾಳೆಯದಲ್ಲಿ ಆತ್ಮಾವಲೋಕನಕ್ಕೆ ಎಡೆಮಾಡಿಕೊಟ್ಟಿದೆ. ಉಳಿದಂತೆ ಕಣದಲ್ಲಿದ್ದ 15 ಅಭ್ಯರ್ಥಿಗಳ ಪೈಕಿ 11 ಅಭ್ಯರ್ಥಿಗಳಿಗೆ ನಾಲ್ಕಂಕಿ ದಾಟಿ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !