‘ಲಗಾನ್‌ ಟೀಂ’ ಥರ ಗೆದ್ದು ಬಂದಿದ್ದೇವೆ: ಸುಮಲತಾ

ಸೋಮವಾರ, ಜೂನ್ 17, 2019
28 °C

‘ಲಗಾನ್‌ ಟೀಂ’ ಥರ ಗೆದ್ದು ಬಂದಿದ್ದೇವೆ: ಸುಮಲತಾ

Published:
Updated:
Prajavani

ಮಂಡ್ಯ: ‘ನಾವು ಲಗಾನ್‌ ಟೀಂ ಮಾದರಿಯಲ್ಲಿ ಚುನಾವಣೆ ಎದುರಿಸಿದೆವು. ನನಗೆ, ನನ್ನ ಬೆಂಬಲಿಗರಿಗೆ ರಾಜಕಾರಣದಲ್ಲಿ ಯಾವ ಅನುಭವವೂ ಇರಲಿಲ್ಲ. ಆದರೂ ಮಂಡ್ಯ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಅವರಿಗೆ ಧನ್ಯವಾದ ಹೇಳಲು ನನ್ನೊಳಗೆ ಪದಗಳೇ ಇಲ್ಲ’ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ಎ.ಸುಮಲತಾ ಗುರುವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಮ್ಮದೊಂದು ಪುಟ್ಟ ತಂಡ ಆಗಿತ್ತು. ಲಗಾನ್‌ ಚಲನಚಿತ್ರದಲ್ಲಿ ಬರುವ ಕ್ರಿಕೆಟ್‌ ತಂಡದಂತೆ ಸಿಕ್ಸರ್‌ ಬಾರಿಸಿ ಗೆದ್ದು ಬಂದಿದ್ದೇವೆ. ಗೆಲುವಿಗೆ ಸಹಕರಿಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ, ರೈತ ಸಂಘಕ್ಕೆ ಅಭಿನಂದಿಸುತ್ತೇನೆ’ ಎಂದರು.

‘ಸರ್ಕಾರವೇ ಬಂದು ನನ್ನ ಎದುರು ನಿಂತಿತ್ತು. ಆದರೂ ಜನ ನನ್ನ ಕೈಬಿಡಲಿಲ್ಲ. ಪ್ರತಿಸ್ಪರ್ಧಿಗಳು ಆಡಿದ ಮಾತುಗಳಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಈ ಗೆಲುವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕ್ಷೇತ್ರದ ಜನರಿಗೆ ಯಾವ ರೀತಿಯಲ್ಲಿ ಧನ್ಯವಾದ ಹೇಳಬೇಕೋ ಗೊತ್ತಾಗುತ್ತಿಲ್ಲ. ಅಂಬರೀಷ್ ಅವರ ಮೇಲೆ ಜನರು ಇಟ್ಟಿರುವ ಪ್ರೀತಿಗೆ ಅಭಾರಿಯಾಗಿದ್ದೇನೆ. ಇದು ದೇವರು ಹಾಗೂ ಅಂಬರೀಷ್ ಅವರ ಆಶೀರ್ವಾದ’ ಎಂದರು.

‘ಕ್ಷೇತ್ರದ ಮಹಿಳೆಯರು ನನ್ನ ಕೈಹಿಡಿದಿದ್ದಾರೆ. ಅವರ ಋಣ ತೀರಿಸಲು ಏನು ಮಾಡಬೇಕು ಎಂದು ಯೋಚನೆ ಮಾಡುತ್ತೇನೆ. ರಾಜಕೀಯದಲ್ಲಿ ಕುತಂತ್ರಗಳು ನಡೆಯುವುದಿಲ್ಲ ಎಂಬುದಕ್ಕೆ ಇದೊಂದು ದೊಡ್ಡ ನಿದರ್ಶನ. ನಕಾರಾತ್ಮಕ ಹಾದಿಯಲ್ಲಿ ರಾಜಕಾರಣ ಮಾಡುವವರಿಗೆ ಪಾಠವಾಗಿದೆ. ಸರ್ಕಾರ, ಯಾರೇ ವಿರುದ್ಧವಿದ್ದರೂ ಜನರು ನನ್ನ ಪರವಾಗಿದ್ದರು. ಆ ಒಂದು ಆತ್ಮವಿಶ್ವಾಸ ನನಗೆ ಮೊದಲಿನಿಂದಲೂ ಇತ್ತು. ದರ್ಶನ್ ಹಾಗೂ ಯಶ್ ಅವರು ತಾಯಿಗೆ ಬೆಂಬಲ ಕೊಟ್ಟಿದ್ದಾರೆ’ ಎಂದರು.

ಮುಂದಿನ ನಿರ್ಧಾರ ಯೋಚಿಸಿಲ್ಲ: ‘ಈಗ ಈ ಗೆಲುವನ್ನು ಖುಷಿಯಿಂದ ಅನುಭವಿಸುತ್ತೇನೆ. ಜನರ ಪರವಾಗಿ ಕೆಲಸ ಮಾಡಲು ಚಿಂತಿಸುತ್ತೇನೆ. ಅಂಬರೀಷ್‌ ಹಾದಿಯಲ್ಲಿ ನಡೆಯುತ್ತೇವೆ. ಮುಂದಿನ ಹಾದಿಯ ಬಗ್ಗೆ ನಾನು ಚಿಂತಿಸಿಲ್ಲ’ ಎಂದರು. ಜಿಲ್ಲಾ ಚುನಾವಣಾಧಿಕಾರಿ ಡಾ.ಪಿ.ಸಿ.ಜಾಫರ್‌ ಅವರಿಂದ ಗೆಲುವಿನ ಪ್ರಮಾಣ ಪತ್ರ ಸ್ವೀಕರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !