ಸಿಹಿ ಹಂಚುವ ವಿಚಾರಕ್ಕೆ ಸುಮಲತಾ ಬೆಂಬಲಿಗರು– ಜೆಡಿಎಸ್‌ ಕಾರ್ಯಕರ್ತರ ಮಾರಾಮಾರಿ

ಗುರುವಾರ , ಜೂನ್ 27, 2019
29 °C

ಸಿಹಿ ಹಂಚುವ ವಿಚಾರಕ್ಕೆ ಸುಮಲತಾ ಬೆಂಬಲಿಗರು– ಜೆಡಿಎಸ್‌ ಕಾರ್ಯಕರ್ತರ ಮಾರಾಮಾರಿ

Published:
Updated:

ಮಂಡ್ಯ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಗುರುವಾರ ರಾತ್ರಿ ಸಿಹಿ ಹಂಚುವ ವಿಚಾರಕ್ಕೆ ಮದ್ದೂರು ತಾಲ್ಲೂಕು ಕೂಳಗೆರೆ ಗ್ರಾಮದ ಜೆಡಿಎಸ್‌ ಕಾರ್ಯಕರ್ತರು ಹಾಗೂ ಎ.ಸುಮಲತಾ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ.

ಸುಮಲತಾ ಗೆಲುವನ್ನು ಸಂಭ್ರಮಿಸಿ ಅವರ ಬೆಂಬಲಿಗರು ಸಿಹಿ ಹಂಚಿಕೆ ಮಾಡುತ್ತಿದ್ದರು. ಜೆಡಿಎಸ್‌ ಕಾರ್ಯರ್ಕತರಿಗೂ ಸಿಹಿ ಹಂಚಲು ಮುಂದಾದಾಗ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಸುಮಲತಾ ಬೆಂಬಲಿಗರಾದ ವೆಂಕಟೇಗೌಡ, ಕುಮಾರ, ಶಶಿ ಗಾಯಗೊಂಡು ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಗ್ರಾಮಕ್ಕೆ ತೆರಳಿ ಮಾಹಿತಿ ಪಡೆದರು. ಗ್ರಾಮಕ್ಕೆ ಪೊಲೀಸ್‌ ಭದ್ರತೆ ನೀಡಲಾಗಿದೆ. ಮದ್ದೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಡಿಎಸ್‌ ಮುಖಂಡರಿಗೆ ಅಭಿನಂದನೆ: ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸಂಸದ ಎಲ್‌.ಆರ್‌.ಶಿವರಾಮೇಗೌಡ ಅವರು ಆಡಿದ ಮಾತುಗಳಿಂದಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದಾರೆ ಎಂದು ಅಭಿನಂದನೆ ಕೋರಿ, ಸಂಭ್ರಮಿಸಿ ಸುಮಲತಾ ಬೆಂಬಲಿಗರು ನಗರದ ನೂರು ಅಡಿ ರಸ್ತೆಯಲ್ಲಿ  ಫ್ಲೆಕ್ಸ್‌ ಹಾಕಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !