ಬಾಗಲಕೋಟೆ: ಮೋದಿ ಅಭಿಮಾನಿಯಿಂದ ಉಚಿತ ಹೇರ್‌ಕಟ್!

ಬುಧವಾರ, ಜೂನ್ 19, 2019
23 °C

ಬಾಗಲಕೋಟೆ: ಮೋದಿ ಅಭಿಮಾನಿಯಿಂದ ಉಚಿತ ಹೇರ್‌ಕಟ್!

Published:
Updated:
Prajavani

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ದೇಶದ ಪ್ರಧಾನಿ ಆಗುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಯಾದ ನಗರದ ಸೆಲೂನ್ ಮಾಲೀಕರೊಬ್ಬರು ಶುಕ್ರವಾರ ಇಡೀ ದಿನ ಗ್ರಾಹಕರಿಗೆ ಉಚಿತವಾಗಿ ಹೇರ್ ಕಟ್ ಮಾಡಿದರು.

ಹಳೇ ಬಾಗಲಕೋಟೆಯ ಧರ್ಮು ಕ್ರಾಸ್‌ ಹತ್ತಿರದ ಲಕ್ಕಿ ಹೇರ್ ಕಟಿಂಗ್ ಸಲೂನ್ ಮಾಲೀಕ ಸುನಿಲ್ ಶಹಾಪುರ ಮೋದಿ ಅಭಿಮಾನಿ.

ಮತ ಎಣಿಕೆ ದಿನವಾದ ಗುರುವಾರ ಬಿಜೆಪಿ ನೇತೃತ್ವದ ಎನ್‌ಡಿಎ ಬಹುಮತ ಪಡೆಯುತ್ತಿದ್ದಂತೆಯೇ ಸಂಭ್ರಮಾಚರಣೆ ಮಾಡಿದ ಸುನಿಲ್ ಸಂಜೆಯ ಹೊತ್ತಿಗೆ ಉಚಿತವಾಗಿ ಹೇರ್‌ಕಟ್ ಹಾಗೂ ಶೇವಿಂಗ್ ಮಾಡುವುದಾಗಿ ತಮ್ಮ ಅಂಗಡಿ ಎದುರು ಬ್ಯಾನರ್ ಹಾಕಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲೂ ಸಂದೇಶ ಹರಿಬಿಟ್ಟಿದ್ದು ಶುಕ್ರವಾರ ಮಧ್ಯಾಹ್ನದವರೆಗೆ ಒಟ್ಟು 70ಕ್ಕೂ ಹೆಚ್ಚು ಜನರಿಗೆ ಹೇರ್ ಕಟ್ ಹಾಗೂ ಶೇವಿಂಗ್ ಮಾಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !