ಮೊಬೈಲ್‌ ಮರಳಿಸಿದ ಆಟೊ ಚಾಲಕ

ಬುಧವಾರ, ಜೂನ್ 19, 2019
23 °C

ಮೊಬೈಲ್‌ ಮರಳಿಸಿದ ಆಟೊ ಚಾಲಕ

Published:
Updated:
Prajavani

ಮಂಗಳೂರು: ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ದುಬಾರಿ ಬೆಲೆಯ ಮೊಬೈಲ್‌ ಒಂದನ್ನು ಮರಳಿಸುವ ಮೂಲಕ ನಗರದ ಆಟೊ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಪಾಂಡೇಶ್ವರ ನಿವಾಸಿ ಬಾಶಿಲ್‌ ಎಂಬುವವರು ಅರುಣ್‌ ಎಂಬುವವರ ಆಟೊದಲ್ಲಿ ತೆರಳಿದ್ದರು. ₹ 78,000 ಮೌಲ್ಯದ ಮೊಬೈಲ್‌ ಆಟೊದಲ್ಲೇ ಉಳಿದಿತ್ತು. ಪ್ರಯಾಣಿಕ ಮೊಬೈಲ್‌ ಬಿಟ್ಟು ಹೋಗಿರುವುದನ್ನು ಗಮನಿಸಿದ ಚಾಲಕ ಅದನ್ನು ತಂದು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್‌ ಠಾಣೆಗೆ ತಂದು ಒಪ್ಪಿಸಿದ್ದರು.

ಬಾಶಿಲ್‌ ಅವರನ್ನು ಪತ್ತೆಮಾಡಿದ ಪಾಂಡೇಶ್ವರ ಠಾಣೆ ಇನ್‌ಸ್ಪೆಕ್ಟರ್‌ ಕುಮಾರ್‌ ಆರಾಧ್ಯ, ಅವರನ್ನು ಠಾಣೆಗೆ ಕರೆಸಿದರು. ಚಾಲಕ ಅರುಣ್ ಅವರ ಸಮ್ಮುಖದಲ್ಲೇ ಮೊಬೈಲ್‌ ಅನ್ನು ಬಾಶಿಲ್‌ ಅವರಿಗೆ ಹಿಂದಿರುಗಿಸಲಾಯಿತು. ಆಟೊ ಚಾಲಕ ಅರುಣ್‌ ಅವರಿಗೆ ಅಭಿನಂದನೆಯನ್ನೂ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !