ಮಕ್ಕಳಿಗೆ ಪರಂಪರೆಯ ಅರಿವು ಮುಖ್ಯ

ಬುಧವಾರ, ಜೂನ್ 19, 2019
26 °C
ಇಂಡಿಯನ್ ಪೋಕ್ ಟ್ರಸ್ಟ್ ವತಿಯಿಂದ ಪೋಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಉಚಿತ ಬೇಸಿಗೆ ಶಿಬಿರ ಆಯೋಜನೆ

ಮಕ್ಕಳಿಗೆ ಪರಂಪರೆಯ ಅರಿವು ಮುಖ್ಯ

Published:
Updated:
Prajavani

ಚಿಕ್ಕಬಳ್ಳಾಪುರ: ‘ತಂತ್ರಜ್ಞಾನ ಆಧಾರಿತ ಆಧುನಿಕತೆಯ ಪ್ರಭಾವದಿಂದಾಗಿ ಮಕ್ಕಳಲ್ಲಿ ನೆಲಮೂಲದ ಸಂಸ್ಕೃತಿ, ನಮ್ಮ ಇತಿಹಾಸ, ಜನಪದ ಕಲೆಗಳ ಬಗ್ಗೆ ಅರಿವು ಕುಂಠಿತಗೊಳ್ಳುತ್ತಿರುವುದು ಆತಂಕದ ವಿಚಾರ’ ಎಂದು ಇಂಡಿಯನ್ ಪೋಕ್ ಟ್ರಸ್ಟ್ ಜಿಲ್ಲಾ ಘಟಕದ ಅಧ್ಯಕ್ಷ ನಲ್ಲಕದಿರೇನಹಳ್ಳಿ ಜಂಬೆ ಬಾಲು ತಿಳಿಸಿದರು.

ಇಂಡಿಯನ್ ಪೋಕ್ ಟ್ರಸ್ಟ್ ವತಿಯಿಂದ ಪೋಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಉಚಿತ ಮಕ್ಕಳ ಬೇಸಿಗೆ ಶಿಬಿರ ಹಾಗೂ ಕಣಿವೆ ಕಲರವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳನ್ನು ಎಳೆಯ ವಯಸ್ಸಿನಿಂದಲೇ ಇತಿಹಾಸ, ಸಂಸ್ಕಾರ, ಮೌಲ್ಯಗಳು, ಜನಪದಗಳಂತಹ ಅಮೂಲ್ಯ ವಿಚಾರಗಳ ಕಡೆಗೆ ಸೆಳೆಯಬೇಕು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟು ವೇಗವಾಗಿ ಮುಂದುವರೆಯುತ್ತಿದೆಯೋ ಅಷ್ಟೇ ವೇಗವಾಗಿ ಮಕ್ಕಳು ನಮ್ಮ ಪರಂಪರೆ ಮರೆಯುವಂತಾಗುತ್ತಿದೆ. ಆಧುನಿಕತೆಯ ವ್ಯಾಮೋಹದಿಂದ ಮಕ್ಕಳನ್ನು ವಾಪಸು ತರುವ ಚಟುವಟಿಕೆಗಳು ಇಂದು ನಡೆಯಬೇಕಿದೆ’ ಎಂದು ಹೇಳಿದರು.

‘ನಮ್ಮ ಪೂರ್ವಜರು ಜನಪದ ಕಲೆಗಳನ್ನು ತಮ್ಮ ಬದುಕಿನ ಭಾಗವಾಗಿ ಮಾಡಿಕೊಂಡು, ಪ್ರೋತ್ಸಾಹ ನೀಡುತ್ತಿದ್ದರು. ಆದರೆ ಇಂದಿನವರು ಟಿ.ವಿ ಮಾಧ್ಯಮಗಳ ಎದುರು ಕುಳಿತು ನಮ್ಮ ನೆಲಮೂಲದ ಕಲೆಗಳನ್ನು ಮರೆಯುತ್ತಿದ್ದಾರೆ. ಸಮಾಜದ ಪ್ರತಿಯೊಬ್ಬರಿಗೂ ಸುಲಭವಾಗಿ, ಸರಳವಾಗಿ ಅರ್ಥವಾಗುವ ಜನಪದ ಸಂಪತ್ತನ್ನು ಉಳಿಸಿ, ಬೆಳೆಸಬೇಕಾಗಿದೆ. ಆಗ ಮಾತ್ರ ನಾವು ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸಲು ಸಾಧ್ಯ’ ಎಂದರು.

‘ಪ್ರತಿಭೆಗೆ ಬಡವ, ಶ್ರೀಮಂತ ಎಂಬ ಬೇಧವಿಲ್ಲ. 10 ದಿನಗಳ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ, ವೀರಗಾಸೆ, ಜಂಬೆ, ತಮಟೆ ವಾದನ, ಜಾನಪದ ಗೀತೆಗಳು, ನಾಟಕ, ವ್ಯಕ್ತಿತ್ವ ವಿಕಸನ, ನಾಯಕತ್ವ ಕೌಶಲ, ಜನಪದ ಕ್ರೀಡೆಗಳು, ಯೋಗ, ಧ್ಯಾನ ತರಬೇತಿ ನೀಡಲಾಗುತ್ತದೆ’ ಎಂದು ಹೇಳಿದರು. ಕಲಾವಿದರಾದ ವಿವೇಕ್ ಮೌರ್ಯ, ಅನೀಶ್, ಅಮರಾವತಿ, ಹನುಮಂತು ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !