ಈಡೇರಿದ ‘1 ಲಕ್ಷ’ ಮತಕ್ಷೇತ್ರ ಗುರಿ

ಸೋಮವಾರ, ಜೂನ್ 17, 2019
29 °C
ಕೆ.ಆರ್‌ ಕ್ಷೇತ್ರದಲ್ಲಿ ಅತ್ಯಧಿಕ ಮುನ್ನಡೆ: ಶಾಸಕ ರಾಮದಾಸ್‌ ಸಂತಸ

ಈಡೇರಿದ ‘1 ಲಕ್ಷ’ ಮತಕ್ಷೇತ್ರ ಗುರಿ

Published:
Updated:
Prajavani

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರಿಗೆ ಕೃ್ವಿಧಾನಸಭಾ ಕ್ಷೇತ್ರ ಅತ್ಯಧಿಕ ಮುನ್ನಡೆ ತಂದುಕೊಟ್ಟಿದೆ ಎಂದು ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆ.ಆರ್‌.ಕ್ಷೇತ್ರವನ್ನು ‘1 ಲಕ್ಷ ಮೋದಿ ಮತ’ ಕ್ಷೇತ್ರವನ್ನಾಗಿಸಲು 2019ರ ಜನವರಿ 10 ರಂದು ಸಂಕಲ್ಪ ಮಾಡಲಾಗಿತ್ತು. ಪಕ್ಷದ ನಾಲ್ಕು ಸಾವಿರ ಕಾರ್ಯಕರ್ತರು 100 ದಿನ ಅವಿತರ ಕೆಲಸ ಮಾಡಿದ್ದರಿಂದ ಈ ಗುರಿ ಈಡೇರಿಸಲು ಸಾಧ್ಯವಾಯಿತು ಎಂದು ಹೇಳಿದರು.

ಇವಿಎಂ ಮತ್ತು ಅಂಚೆ ಮತಗಳು ಸೇರಿದಂತೆ ಬಿಜೆಪಿಗೆ 1,00,100 ಮತಗಳು ಬಿದ್ದಿವೆ. ಈ ಮೂಲಕ ‘1 ಲಕ್ಷ’ ಮತ ಕ್ಷೇತ್ರವನ್ನಾಗಿಸಿದ ಹಿರಿಮೆ ದೊರೆತಿದೆ. ಇದರ ಶ್ರೇಯ ಕಾರ್ಯಕರ್ತರಿಗೆ ಸಲ್ಲಬೇಕು ಎಂದರು.

2018ರ ವಿಧಾನಸಭಾ ಚುನಾವಣೆ ವೇಳೆ ಕೆ.ಆರ್‌.ಕ್ಷೇತ್ರದಲ್ಲಿ ಪಕ್ಷಕ್ಕೆ 26,650 ಮತಗಳ ಮುನ್ನಡೆ ದೊರೆತಿತ್ತು. ಲೋಕಸಭೆ ಚುನಾವಣೆಯಲ್ಲಿ 52,601 ಮತಗಳ ಭಾರಿ ಮುನ್ನಡೆ ಲಭಿಸಿದೆ. ಚಲಾವಣೆಯಾದ ಮತಗಳಲ್ಲಿ ಶೇ 70 ರಷ್ಟು ಕೂಡಾ ಬಿಜೆಪಿಗೆ ಬಿದ್ದಿವೆ ಎಂದು ಮಾಹಿತಿ ನೀಡಿದರು.

ಕೆ.ಆರ್‌.ಕ್ಷೇತ್ರದ ಮತದಾರರು ಜಾತಿ, ಧರ್ಮವನ್ನು ಮೀರಿ ಬಿಜೆಪಿಗೆ ಮತ ಹಾಕಿದ್ದಾರೆ. ದಲಿತರು, ಮುಸ್ಲಿಮರು ಮತ್ತು ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿರುವ ಬೂತ್‌ಗಳಲ್ಲೂ ಬಿಜೆಪಿಗೆ ಮುನ್ನಡೆ ಲಭಿಸಿದೆ. ದೇಶದ ಹಿತವನ್ನು ಕಾಪಾಡಲು ನರೇಂದ್ರ ಮೋದಿ ಅವರನ್ನು ಮತ್ತೆ ಬೆಂಬಲಿಸಿದ್ದಾರೆ ಎಂದರು.

ಮತದಾರರಲ್ಲಿ ಅರಿವು: ಈ ಬಾರಿಯ ಚುನಾವಣೆಯಲ್ಲಿ ಕೆ.ಆರ್‌.ಕ್ಷೇತ್ರದಲ್ಲಿ ಯಾರೆಲ್ಲಾ ಮತದಾನ ಮಾಡಿಲ್ಲ ಎಂಬುದನ್ನು ಗುರುತಿಸಲಾಗಿದೆ. ಯಾವ ಮನೆಯಲ್ಲಿ ಎಷ್ಟು ಮತಗಳು ಬಂದಿವೆ ಎಂಬ ಮಾಹಿತಿಯನ್ನು ಬೂತ್‌ ಮಟ್ಟದಲ್ಲಿ ಕಲೆಹಾಕಲಾಗಿದೆ. ಮತದಾನ ಮಾಡದವರ ಬಳಿ ತೆರಳಿ ಮುಂದಿನ ಬಾರಿ ತಪ್ಪದೆ ಮತದಾನ ಮಾಡುವಂತೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !