ಪಾಕಿಸ್ತಾನ ತಂಡದೊಂದಿಗೆ ಕುಟುಂಬಕ್ಕೆ ‘ಪ್ರವಾಸ’ ಇಲ್ಲ

ಗುರುವಾರ , ಜೂನ್ 27, 2019
23 °C

ಪಾಕಿಸ್ತಾನ ತಂಡದೊಂದಿಗೆ ಕುಟುಂಬಕ್ಕೆ ‘ಪ್ರವಾಸ’ ಇಲ್ಲ

Published:
Updated:
Prajavani

ಆರ್ಥಿಕ ಸಮಸ್ಯೆ ಅನುಭವಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ವಿಶ್ವಕಪ್‌ನಲ್ಲಿ ಆಡುವ ಆಟಗಾರರ ಕುಟುಂಬದವರು ತಂಡದೊಂದಿಗೆ ತೆರಳುವಂತಿಲ್ಲ ಎಂದು ತಾಕೀತು ಮಾಡಿದೆ. ಮಂಡಳಿಯ ನಿಯಮಾವಳಿಯ ಪ್ರಕಾರ ಕುಟುಂಬದವರು ಸ್ವಂತ ಖರ್ಚಿನಲ್ಲಿ ತೆರಳಬಹುದು ಎಂದು ಹೇಳಿದೆ.

ವಿಶ್ವಕಪ್ ಟೂರ್ನಿಗೂ ಮೊದಲು ಇಂಗ್ಲೆಂಡ್‌ನಲ್ಲಿ ನಡೆದ ಆತಿಥೇಯರ ಎದುರಿನ ಸರಣಿಯಲ್ಲಿ ಆಡಿದ್ದ ಆಟಗಾರರು ಪತ್ನಿ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಆದರೆ ಈಗ ಹೊಸ ನಿಯಮಾವಳಿ ಜಾರಿಗೆ ಬಂದಿದೆ ಎಂದು ಮಂಡಳಿ ಆಟಗಾರರಿಗೆ ತಿಳಿಸಿದೆ.

ಪತ್ನಿ ಮತ್ತು ಮಕ್ಕಳು ಜೊತೆಯಲ್ಲಿದ್ದರೆ ಆಟದ ಕಡೆಗೆ ಹೆಚ್ಚು ಗಮನ ನೀಡಲು ಸಾಧ್ಯವಾಗುವುದಿಲ್ಲ. ಇದು ತಂಡದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮಂಡಳಿ ಹೇಳಿಕೊಂಡಿದೆ. ಆದರೆ ಆರ್ಥಿಕ ಸಂಕಷ್ಟವೂ ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ. ಈ ಬಾರಿ ಪಾಕಿಸ್ತಾನದ ಮೊದಲ ಪಂದ್ಯ ವೆಸ್ಟ್ ಇಂಡೀಸ್ ವಿರುದ್ಧ ಮೇ 31ರಂದು ನಾಟಿಂಗಂನಲ್ಲಿ ನಡೆಯಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !