‘ಲಿಂಗ ಸಮಾನತೆ’ ವೋಲ್ವೊ ಅಭಿಯಾನ

ಗುರುವಾರ , ಜೂನ್ 27, 2019
29 °C
ಕಾರು ನಿರ್ಮಾಣದಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತು

‘ಲಿಂಗ ಸಮಾನತೆ’ ವೋಲ್ವೊ ಅಭಿಯಾನ

Published:
Updated:
Prajavani

ಮಹಿಳೆಯರ ಸುರಕ್ಷತೆಗೆ ಒತ್ತು ನೀಡಲು ಮತ್ತು ಲಿಂಗ ಸಮಾನತೆ ಅರಿವು ಮೂಡಿಸುವ ಉದ್ದೇಶದಿಂದ ವೋಲ್ವೊ ಕಾರ್ ಇಂಡಿಯಾ ಜಾಗೃತಿ ಅಭಿಯಾನಕ್ಕೆ ನಗರದಲ್ಲಿ ಚಾಲನೆ ನೀಡಿದೆ. 

ಮಹಿಳೆಯರು ಮತ್ತು ಪುರುಷ ಪ್ರಯಾಣಿಕರಿಗೆ ಸಮಾನ ಸುರಕ್ಷತಾ ಕ್ರಮಗಳನ್ನು ಒದಗಿಸುವ ಧ್ಯೇಯದ ‘ಎಲ್ಲರಿಗೂ ಸಮಾನ ವಾಹನ’ ಜಾಗತಿಕ ಕಾರ್ಯಕ್ರಮದ ಅಂಗವಾಗಿ ವೋಲ್ವೊ ಈ ಅಭಿಯಾನ ಹಮ್ಮಿಕೊಂಡಿದೆ. 

ಅಪಘಾತದ ಸಂದರ್ಭದಲ್ಲಿ ಮಹಿಳೆ ಮತ್ತು ಪುರುಷ ಪ್ರಯಾಣಿಕರಿಬ್ಬರ ಸುರಕ್ಷತೆಯನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ಕೃತಕ ಬುದ್ಧಿಮತ್ತೆ ಆಧರಿಸಿ ಕಾರ್ಯನಿರ್ವಹಿಸುವ ಸೀಟುಗಳನ್ನು ವೋಲ್ವೊ ಕಾರಿನಲ್ಲಿ  ವಿನ್ಯಾಸಗೊಳಿಸಲಾಗಿದೆ ಎಂದು ವೋಲ್ವೊ ಕಾರ್ ಇಂಡಿಯಾದ ಕಾರ್ಪೊರೇಟ್ ಕಮ್ಯುನಿಕೇಷನ್‌ ನಿರ್ದೇಶಕ ಸುದೀಪ್ ನಾರಾಯಣ್ ಹೇಳಿದರು. 

ವಾಹನ ತಯಾರಿಕೆ ಮತ್ತು ಸುರಕ್ಷತಾ ಸೌಲಭ್ಯಗಳ ಅಳವಡಿಕೆ ಹಂತದಲ್ಲಷ್ಟೇ ವೋಲ್ವೊ ಕಾರು ತಯಾರಿಕಾ ಕಂಪನಿಯ ಲಿಂಗ ಸಮಾನತೆ ಕಾಳಜಿಯು ಸೀಮಿತವಾಗಿಲ್ಲ. ಇದು ಸಂಸ್ಥೆಯ ಕಾರ್ಪೊರೇಟ್ ಕಾರ್ಯಕ್ರಮ ಮತ್ತು ಸಂಸ್ಕೃತಿಯ ಭಾಗವೂ ಆಗಿದೆ ಎಂದು ತಿಳಿಸಿದರು.  

2025ರ ವೇಳೆಗೆ ಸಂಸ್ಥೆಯ ಎಲ್ಲ ಪ್ರಮುಖ ಹುದ್ದೆಗಳಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಕಾರ್ಯನಿರ್ವಹಿಸುತ್ತಿರಬೇಕು ಎನ್ನುವುದು ಸಂಸ್ಥೆಯ ಗುರಿಯಾಗಿದೆ. ಸಂಸ್ಥೆಯ ಒಟ್ಟಾರೆ ಸಿಬ್ಬಂದಿಯಲ್ಲಿ ಮಹಿಳೆಯರ ಪಾಲು ಶೇ 23ರಷ್ಟು ಇರಲಿದೆ ಎಂದರು. ವಿವಿಧ ಕ್ಷೇತ್ರಗಳ ಮಹಿಳೆಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !