ಶನಿವಾರ, 28–5–1994

ಭಾನುವಾರ, ಜೂನ್ 16, 2019
28 °C

ಶನಿವಾರ, 28–5–1994

Published:
Updated:

ಮೌಲ್ಯವರ್ಧಿತ ತೆರಿಗೆ ಜಾರಿಗೆ ವಿಧಾನ ರೂಪಿಸಲು ಸಮಿತಿ
ನವದೆಹಲಿ, ಮೇ 27 (ಪಿಟಿಐ)–
ಮಾರಾಟ ತೆರಿಗೆಗೆ ಪರ್ಯಾಯವಾಗಿ ಮೌಲ್ಯವರ್ಧಿತ ತೆರಿಗೆಯನ್ನು ಹಂತ ಹಂತವಾಗಿ ಜಾರಿಗೊಳಿಸಲು ಅಗತ್ಯವಾದ ವಿಧಿ ವಿಧಾನ ರೂಪಿಸಲು ಸಮಿತಿಯೊಂದರ ರಚನೆಗೆ ರಾಜ್ಯಗಳ ಹಣಕಾಸು ಸಚಿವರ ಸಮ್ಮೇಳನ ಇಂದು ಇಲ್ಲಿ ಒಪ್ಪಿಕೊಂಡಿತು.

ಮೌಲ್ಯವರ್ಧಿತ ತೆರಿಗೆ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಹಣಕಾಸು ಸಚಿವ ಡಾ. ಮನಮೋಹನ ಸಿಂಗ್ ಅವರು ಸಮಾವೇಶವನ್ನು ಉದ್ಘಾಟಿಸುವಾಗ ಮಾಡಿದ್ದ ಸಲಹೆ ಹಿನ್ನೆಲೆಯಲ್ಲಿ ಸಮಿತಿ ರಚನೆಗೆ ನಿರ್ಧಾರ ಕೈಗೊಳ್ಳಲಾಯಿತು.

ರಾಷ್ಟ್ರದಲ್ಲಿ ತೆರಿಗೆ ವ್ಯವಸ್ಥೆ ಸುಧಾರಣೆ ಅಂಗವಾಗಿ ‘ವ್ಯಾಟ್’ ಪದ್ಧತಿಯನ್ನು ಹಂತ ಹಂತವಾಗಿ ಅಳವಡಿಸಲು ಹೆಚ್ಚಿನ ರಾಜ್ಯಗಳ ಸಚಿವರು ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ಮುಖ್ಯವಾಗಿ ರಾಜಸ್ತಾನವು ಯಾವುದೇ ಹೊಸ ವ್ಯವಸ್ಥೆಯು ರಾಜ್ಯಗಳಿಗೆ ಸೂಕ್ತವಾದ ಸಂಪನ್ಮೂಲವಿರುವಂತೆ ಆಗಿರಬೇಕೆಂದು ವಾದಿಸಿತು.

‘ನೊಣ ಕೊಲ್ಲಲು ಬುಲ್‌ಡೋಜರ್’
ನವದೆಹಲಿ, ಮೇ 27 (ಯುಎನ್‌ಐ)–
‘ನೊಣ ಕೊಲ್ಲಲು ಬುಲ್‌ಡೋಜರ್ ಬಳಸಿದಂತೆ’– ಇದು ಉದ್ದೇಶಿತ ಚುನಾವಣಾ ಸುಧಾರಣಾ ಮಸೂದೆ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ವ್ಯಕ್ತಪಡಿಸಿದ ಅಭಿಪ್ರಾಯ.

ಇಂದು ಯುವ ಸಮಾವೇಶದ ಮುಕ್ತಾಯ ಭಾಷಣ ಮಾಡಿದ ಅವರು, ‘ಭಾರತದಲ್ಲಿ ಚುನಾವಣೆಗಳು ಹಣ, ಭ್ರಷ್ಟಾಚಾರ ಮತ್ತು ಅಪರಾಧದ ಅಡಿಪಾಯ ಆಧರಿಸಿವೆ. ಯಾವುದು ಸರಿ ಯಾವುದು ತಪ್ಪು ಎಂದು ಮತದಾರರಿಗೆ ತಿಳಿಸುವ ಪಾಪದ ಕೆಲಸವನ್ನು ಮಾಡಿದ್ದೇನೆ. ನೀವು ನನ್ನನ್ನು ಕಿತ್ತೊಗೆಯುವುದಾದರೆ ನಾಳೆಯೇ ಹೋಗಲು ಸಿದ್ಧ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !