ಭಾನುವಾರ, ನವೆಂಬರ್ 17, 2019
25 °C

ಯೋಧನಿಗೆ ವಿದೇಶಿ ವ್ಯಕ್ತಿ ಹಣೆಪಟ್ಟಿ: ಖಂಡನೆ

Published:
Updated:
Prajavani

ನವದೆಹಲಿ: ಮಾಜಿ ಯೋಧ ಮೊಹಮ್ಮದ್‌ ಸನಾವುಲ್ಲಾ ಅವರನ್ನು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ (ಎನ್‌ಆರ್‌ಸಿ) ಅಡಿ ‘ವಿದೇಶಿ ವ್ಯಕ್ತಿ’ ಎಂದು ಗುರುತಿಸಿರುವುದಕ್ಕೆ ಕಾಂಗ್ರೆಸ್‌ ಗುರುವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. 

ಮೊಹಮ್ಮದ್‌ ಸನಾವುಲ್ಲಾ ಅವರು ಅಸ್ಸಾಂನ ಕಾಮರೂಪ ಜಿಲ್ಲೆ, ಕೊಲೊಹಿಕಾಶ್ ಗ್ರಾಮದಲ್ಲಿ ಜನಿಸಿದ್ದು, ಗುವಾಹಟಿಯ ನಿವಾಸಿಯಾಗಿ
ದ್ದಾರೆ. ಇವರು 1999ರ ಕಾರ್ಗಿಲ್‌ ಯುದ್ಧದಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿದ್ದರು. ಸೇನೆಯಿಂದ ನಿವೃತ್ತರಾದ ನಂತರ ಅಸ್ಸಾಂ ಗಡಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ವಿದೇಶಿಯರನ್ನು ಗುರುತಿಸುವ ಪ್ರಾಧಿಕಾರವು ಇವರನ್ನು ‘ವಿದೇಶಿ ವ್ಯಕ್ತಿ’ ಎಂದಿರುವುದು ಸರಿಯಲ್ಲ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

‘ದೇಶಕ್ಕಾಗಿ ಹೋರಾಡಿದ ಯೋಧನನ್ನು ವಿದೇಶಿ ವ್ಯಕ್ತಿ ಎನ್ನಲಾಗಿದೆ. ಈ ಮೂಲಕ ಬಿಜೆಪಿ ಸರ್ಕಾರ ಸೇನಾಪಡೆಯನ್ನು, ಯೋಧ
ರನ್ನು ಅವಮಾನಿಸಿದೆ. ಎನ್‌ಆರ್‌ಸಿ ಕಾಯ್ದೆ ದುರುಪಯೋಗ ಪಡಿಸಿಕೊಳ್ಳುತ್ತಿರುವುದಲ್ಲದೆ, ಅಸ್ಸಾಂ ನಾಗರಿಕರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುತ್ತಿದೆ’ ಎಂದು ಅವರು ಟ್ವೀಟ್‌ನಲ್ಲಿ ಖಂಡಿಸಿದ್ದಾರೆ.  ಮತದಾರರ ಪಟ್ಟಿಯಲ್ಲಿ ಸನಾವುಲ್ಲಾ ಅವರನ್ನು  ‘ಡಿ’ (ಶಂಕಿತರು) ಪಟ್ಟಿಯಲ್ಲಿ  ಸೇರಿಸಲಾಗಿದ್ದು, ಈ ಕುರಿತು ಅವರ ಕುಟುಂಬ ಗುವಾಹಟಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.   

ಪ್ರತಿಕ್ರಿಯಿಸಿ (+)