ಶಾಲಾ ಮಕ್ಕಳ ಸುರಕ್ಷತೆಗೆ ಜಿಲ್ಲಾಡಳಿತ ಒತ್ತು; 15ವರ್ಷ ಪೂರೈಸಿದ ವಾಹನ ಬಳಕೆ ನಿಷೇಧ

ಬುಧವಾರ, ಜೂನ್ 19, 2019
30 °C
ಸುಪ್ರೀಂಕೋರ್ಟ್ ನಿರ್ದೇಶನ ಪಾಲನೆ

ಶಾಲಾ ಮಕ್ಕಳ ಸುರಕ್ಷತೆಗೆ ಜಿಲ್ಲಾಡಳಿತ ಒತ್ತು; 15ವರ್ಷ ಪೂರೈಸಿದ ವಾಹನ ಬಳಕೆ ನಿಷೇಧ

Published:
Updated:
Prajavani

ಬಾಗಲಕೋಟೆ: ಜಿಲ್ಲೆಯಲ್ಲಿ 15 ವರ್ಷ ಪೂರೈಸಿದ ವಾಹನಗಳನ್ನು ಇನ್ನು ಶಾಲಾ ಮಕ್ಕಳನ್ನು ಕರೆದೊಯ್ಯಲು ಬಳಸುವಂತಿಲ್ಲ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾ ರಸ್ತೆ ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಹೀಗೊಂದು ಕಠಿಣ ತೀರ್ಮಾನ ಕೈಗೊಂಡಿದೆ.

ಬೇಸಿಗೆ ರಜೆ ಮುಗಿದು ಮತ್ತೆ ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ನಡೆಸಿರುವ ಆರ್‌ಟಿಎ ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ಹಲವು ನಿಯಮಾವಳಿಗಳನ್ನು ರೂಪಿಸಿದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಲು ಮುಂದಾಗಿದೆ.

‘ಸದ್ಯಕ್ಕೆ ಈ ನಿಯಮಾವಳಿಯನ್ನು ಶಾಲಾ ಬಸ್‌ಗಳಿಗೆ ಅನ್ವಯಿಸುತ್ತಿದ್ದೇವೆ. ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳನ್ನು ಕೊಂಡೊಯ್ಯುವ ಎಲ್ಲ ವಾಹನಗಳಿಗೂ ವಿಸ್ತರಿಸಲು ಯೋಚಿಸಿದ್ದೇವೆ. ಆ ಬಗ್ಗೆ ಇನ್ನಷ್ಟೇ ತೀರ್ಮಾನ ಕೈಗೊಳ್ಳಬೇಕಿದೆ. ನಮಗೆ ಮಕ್ಕಳ ಹಿತ ಮಾತ್ರ ಮುಖ್ಯ’ ಎಂದು ಬಾಗಲಕೋಟೆ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಅಪ್ಪಯ್ಯ ನಾಲತ್ವಾಡಮಠ ಹೇಳುತ್ತಾರೆ.

ಚಾಲಕರಿಗೂ ತರಬೇತಿ;

‘ಶಾಲಾ ವಾಹನಗಳನ್ನು ಜವಾಬ್ದಾರಿಯಿಂದ ಚಾಲನೆ ಮಾಡುವ ಜೊತೆಗೆ ಅದರಲ್ಲಿ ಪ್ರಯಾಣಿಸುವ ಮಕ್ಕಳೊಂದಿಗೆ ಚಾಲಕ ಹಾಗೂ ಸಹಾಯಕ ನಡೆದುಕೊಳ್ಳಬೇಕಾದ ರೀತಿಯ ಬಗ್ಗೆಯೂ ಪ್ರಾದೇಶಿಕ ಸಾರಿಗೆ ಇಲಾಖೆಯಿಂದಲೇ ತರಬೇತಿ ನೀಡಲು ನಿರ್ಧರಿಸಿದ್ದೇವೆ. ತಾಲ್ಲೂಕು ಮಟ್ಟದಲ್ಲಿಯೇ ಕಾರ್ಯಾಗಾರ ಆಯೋಜಿಸಲಿದ್ದೇವೆ’ ಎಂದು ಆರ್‌ಟಿಒ ಹೇಳುತ್ತಾರೆ.

ಪೋಷಕರದ್ದೂ ಜವಾಬ್ದಾರಿ:

ಟಂ.ಟಂ ಹಾಗೂ ಆಟೊಗಳಲ್ಲಿ ಮಕ್ಕಳನ್ನು ಕಳಿಸುವುದು ಆರ್ಥಿಕ ದೃಷ್ಟಿಯಿಂದ ಪೋಷಕರಿಗೆ ಅನಿವಾರ್ಯವಾಗಿದೆ. ಆದರೆ ಅವುಗಳಲ್ಲಿ ಆರು ಮಂದಿಯನ್ನು ಮಾತ್ರ ಕಳಿಸಬೇಕು ಎಂಬ ನಿಯಮವಿದೆ. ಶಾಲಾ ಬಸ್‌ ಜೊತೆಗೆ ಬೇರೆ ವಾಹನಗಳಲ್ಲಿ ಕಳುಹಿಸಿದಲ್ಲಿ ಶಾಲೆಯ ಆಡಳಿತಮಂಡಳಿ, ಸಾರಿಗೆ ಪ್ರಾಧಿಕಾರ, ಪೊಲೀಸರ ಜೊತೆಗೆ ಮಕ್ಕಳ ಪೋಷಕರದ್ದೂ ಹೆಚ್ಚಿನ ಜವಾಬ್ದಾರಿ ಇರಲಿದೆ ಎನ್ನುತ್ತಾರೆ.

ಶಾಲಾ ಮುಖ್ಯಸ್ಥರ ಸಭೆ: ಜಿಲ್ಲೆಯಲ್ಲಿರುವ 680 ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಕರೆದು ಸಭೆ ನಡೆಸಿರುವ ಜಿಲ್ಲಾಧಿಕಾರಿ, ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಲು ಹಾಗೂ ಸುಪ್ರೀಂಕೋರ್ಟ್‌ನ ಮಾರ್ಗಸೂಚಿಯನ್ನು ಪಾಲನೆ ಮಾಡಲು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !