ಸೋಮವಾರ, ಏಪ್ರಿಲ್ 19, 2021
31 °C

ಕ್ರೀಡಾ ಪತ್ರಕರ್ತ ಸಿದ್ಧಾಂತ್ ಪಟ್ನಾಯಕ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕ್ರೀಡಾ ಪತ್ರಕರ್ತ ಸಿದ್ಧಾಂತ್ ಪಟ್ನಾಯಕ್ (34) ಅವರು ಶನಿವಾರ ನಿಧನರಾದರು.  ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ ಮತ್ತು ಒಬ್ಬ ಮಗಳು ಇದ್ದಾರೆ.

ಮೂಲತಃ ಒಡಿಶಾದ ಸಿದ್ಧಾಂತ್‌ ಅವರು ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದರು. ಹವ್ಯಾಸಿ ಕ್ರಿಕೆಟ್ ಬರಹಗಾರರಾಗಿ ಹಲವು ಇಂಗ್ಲಿಷ್ ವೆಬ್‌ಸೈಟ್‌ಗಳಿಗೆ ಲೇಖನಗಳನ್ನು ಬರೆದಿದ್ದರು. 2012ರಲ್ಲಿ ವಿಸ್ಡನ್ ಇಂಡಿಯಾ ವೆಬ್‌ಸೈಟ್ ನಲ್ಲಿ ವರದಿಗಾರನಾಗಿ ಸೇರಿದ್ದರು. ವಿಸ್ಡನ್ ಇಂಡಿಯಾ ಆಲ್ಮನ್ಯಾಕ್, ವುಮೆನ್ಸ್‌ ಕ್ರಿಕ್‌ಜೋನ್ ವೆಬ್‌ಸೈಟ್ ಮತ್ತು ನಿಯತಕಾಲಿಕೆಗೆ ಅವರು ಕಾರ್ಯನಿರ್ವಹಿಸುತ್ತಿದ್ದರು. ಭಾರತದ ಮಹಿಳಾ ಕ್ರಿಕಟ್ ಇತಿಹಾಸದ ಕುರಿತ ‘ದ ಫೈರ್‌ ಬರ್ನ್ಸ್ ಬ್ಲ್ಯೂ: ಎ ಹಿಸ್ಟರಿ ಆಫ್ ವುಮೆನ್ಸ್‌ ಕ್ರಿಕೆಟ್ ಇನ್ ಇಂಡಿಯಾ’ ಪುಸ್ತಕದ ಸಹಲೇಖಕರಾಗಿದ್ದರು ಎಂದು ಬೆಂಗಳೂರು ಕ್ರೀಡಾ ಬರಹಗಾರರ ಸಂಸ್ಥೆ (ಸ್ವ್ಯಾಬ್‌) ಪ್ರಕಟಣೆಯಲ್ಲಿ ತಿಳಿಸಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.